ನ್ಯಾ. ರಾಜೇಂದ್ರ ಸಾಚಾರ್ ಇನ್ನಿಲ್ಲ

First Published Apr 20, 2018, 6:17 PM IST
Highlights

ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಯುಪಿಏ ಸರ್ಕಾರ 2005ರಲ್ಲಿ ನ್ಯಾ. ಸಾಚಾರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.  

ನವದೆಹಲಿ: ದೆಹಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ನ್ಯಾ. ರಾಜೇಂದ್ರ ಸಾಚಾರ್ ವಿಧಿವಶರಾಗಿದ್ದಾರೆ. 94 ವರ್ಷ ಪ್ರಾಯದ ಜಸ್ಟಿಸ್ ಸಾಚಾರ್ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದು, ಸಂಜೆ 5.30ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ.

1985ರಲ್ಲಿ ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ. ಸಾಚಾರ್ ಮಾನವ ಹಕ್ಕುಗಳ ಸಂಸ್ಥೆಯಾಗಿರುವ ಪಿಯುಸಿಲ್’ನೊಂದಿಗೂ ಸೇರಿ ಸೇವೆ ಸಲ್ಲಿಸಿದ್ದರು.

ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಯುಪಿಏ ಸರ್ಕಾರ 2005ರಲ್ಲಿ ನ್ಯಾ. ಸಾಚಾರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.  

click me!