ಈ ಪಕ್ಷದಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ..!

First Published May 17, 2018, 12:27 PM IST
Highlights

‘ಆ್ಯಂಟಿ ಕರಪ್ಷನ್ ಡೈನಾಮಿಕ್ ಪಾರ್ಟಿ’ ಹೆಸರಿನ ಪಕ್ಷ ಮುಂದಿನ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಆದರೆ ತಮ್ಮ ಪಕ್ಷ ಕೇವಲ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಿದೆ ಎಂದು ನ್ಯಾ.ಕರ್ಣನ್ ಹೇಳಿದ್ದಾರೆ.

ಕೋಲ್ಕತಾ(ಮೇ.17): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳು ಜೈಲು ವಾಸ ಅನುಭವಿಸಿ ಬಿಡುಗಡೆಯಾಗಿದ್ದ ಕಲ್ಕತ್ತಾ ಹೈಕೋರ್ಟ್'ನ ಮಾಜಿ ನ್ಯಾಯಮೂರ್ತಿ ಸಿ.ಎಸ್. ಕರ್ಣನ್, ಬುಧವಾರ ಹೊಸ ಪಕ್ಷ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 

‘ಆ್ಯಂಟಿ ಕರಪ್ಷನ್ ಡೈನಾಮಿಕ್ ಪಾರ್ಟಿ’ ಹೆಸರಿನ ಪಕ್ಷ ಮುಂದಿನ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಆದರೆ ತಮ್ಮ ಪಕ್ಷ ಕೇವಲ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಿದೆ ಎಂದು ನ್ಯಾ.ಕರ್ಣನ್ ಹೇಳಿದ್ದಾರೆ.

ತಾವು ಘೋಷಣೆ ಮಾಡಿರುವ ನೂತನ ಪಕ್ಷದ ನೋಂದಣಿಗಾಗಿ ಶೀಘ್ರವೇ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗುವುದು. ಹೊಸ ಪಕ್ಷವು, ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ವಾರಾಣಸಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಮುಖ್ಯ ಗುರಿ ಎಂದು ಹೇಳಿದ್ದಾರೆ.

click me!