ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ನ್ಯಾ. ಜೆ.ಎಸ್ ಖೇಹರ್

By Suvarna Web DeskFirst Published Dec 6, 2016, 7:55 AM IST
Highlights

ಸರ್ವೋಚ್ಚ ನ್ಯಾಯಾಲಯದ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಜೆ.ಎಸ್. ಖೇಹರ್

ನವದೆಹಲಿ (ಡಿ.06): ಸರ್ವೋಚ್ಚ ನ್ಯಾಯಾಲಯದ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಜೆ.ಎಸ್. ಖೇಹರ್ ಅವರನ್ನು ನೇಮಕ ಮಾಡಲಾಗಿದೆ. 2017 ಜನವರಿ 4 ರಂದು ಖೇಹರ್ ರಾಷ್ಟ್ರಪತಿಯವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾರತದ 44 ನೇ ಮುಖ್ಯ ನ್ಯಾಯಮೂರ್ತಿ ಇವರಾಗಲಿದ್ದು, ಜ.04, 2017 ರಿಂದ ಆ.4 ವರೆಗೆ ಸೇವೆ ಸಲ್ಲಿಸಲಿದ್ದಾರೆ. ಜೊತೆಗೆ ಸಿಖ್ ಸಮುದಾಯದ ಮೊದಲ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎನ್ನುವ ಹೆಗ್ಗಳಿಕೆಗೂ ಕೂಡಾ ಖೇಹರ್ ಪಾತ್ರರಾಗಲಿದ್ದಾರೆ. ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿರುವ ಟಿ.ಎಸ್ ಠಾಕೂರ್ ಖೇಹರ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.   

click me!