ಹಫೀಜ್‌ ಬಂಧನ ಹಿಂದಿನ ಉದ್ದೇಶದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಅಮೆರಿಕ!

By Web DeskFirst Published Jul 21, 2019, 9:57 AM IST
Highlights

ಬಂಧಿಸಿದಾಗ ಆತನ ಚಟುವಟಿಕೆ ಹಾಗೂ ಆತನ ಉಗ್ರ ಸಂಘಟನೆ ಲಷ್ಕರ್‌- ಎ- ತೊಯ್ಬಾ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ| ಹಫೀಜ್‌ ಬಂಧನ ಹಿಂದಿನ ಉದ್ದೇಶದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಅಮೆರಿಕ| 

ವಾಷಿಂಗ್ಟನ್‌[ಜು.21]: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್‌ ಸಯೀದ್‌ ಬಂಧನದ ಹಿಂದಿರುವ ಉದ್ದೇಶದ ಬಗ್ಗೆ ಅಮೆರಿಕ ಸಂದೇಹ ವ್ಯಕ್ತಪಡಿಸಿದೆ. ಈ ಹಿಂದೆ ಹಫೀಜ್‌ ಸಯೀದ್‌ ಬಂಧಿಸಿದಾಗ ಆತನ ಚಟುವಟಿಕೆ ಹಾಗೂ ಆತನ ಉಗ್ರ ಸಂಘಟನೆ ಲಷ್ಕರ್‌- ಎ- ತೊಯ್ಬಾ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ ಎಂದು ಟಂಪ್‌ ಆಡಳಿತ ತಿಳಿಸಿದೆ.

‘ನಾವು ಈ ಹಿಂದೆ ಈ ರೀತಿ ಆಗಿದ್ದನ್ನು ನೋಡಿದ್ದೇವೆ. ಪಾಕಿಸ್ತಾನದಿಂದ ಸುಸ್ಥಿರ ಮತ್ತು ದೃಢ ನಿರ್ಧಾರವನ್ನು ನಾವು ನಿರೀಕ್ಷಿಸಿದ್ದೆವೆಯೇ ಹೊರತು ಚತುರ ಪ್ರದರ್ಶನವನ್ನಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದಾರೆ.

ಪಾಕ್‌ನಿಂದ ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯ್ಯೀದ್ ಬಂಧನ!

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮುಂದಿನ ವಾರ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ವಿಶ್ವ ಸಂಸ್ಥೆಯ ನಿಷೇಧಿತ ಉಗ್ರ ಸಯೀದ್‌ನನ್ನು ಬುಧವಾರ ಪಾಕಿಸ್ತಾನ ಬಂಧಿಸಿತ್ತು. 2011ರ ಬಳಿಕ ಸಯೀದ್‌ನನ್ನು ಪಾಕಿಸ್ತಾನ ಬಂಧಿಸಿರುವುದು 7ನೇ ಬಾರಿ ಆಗಿದೆ.

click me!