ಆಡಳಿತದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಸಲ್ಲ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್

By Suvarna Web DeskFirst Published Nov 26, 2016, 2:32 PM IST
Highlights

ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ನಿರ್ದೇಶನ ನೀಡಬೇಕು; ಆದರೆ,ಯಾರನ್ನು ಆಡಳಿತ ನಡೆಸಲು ಚುನಾಯಿಸಲಾಗಿದೆಯೋ ಅವರೇ ಆಡಳಿತ ನಡೆಸಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡರೆ, ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದು, ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನವದೆಹಲಿ (ನ.26): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಟಿ.ಎಸ್. ಠಾಕೂರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಆಡಳಿತದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಸಲ್ಲದು ಎಂದಿದ್ದಾರೆ.

ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ನಿರ್ದೇಶನ ನೀಡಬೇಕು; ಆದರೆ,ಯಾರನ್ನು ಆಡಳಿತ ನಡೆಸಲು ಚುನಾಯಿಸಲಾಗಿದೆಯೋ ಅವರೇ ಆಡಳಿತ ನಡೆಸಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡರೆ, ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದು, ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸಂವಿಧಾನವು ಶಾಸಕಾಂಗಕ್ಕೆ ಶಾಸನಾಧಿಕಾರವನ್ನು ಕೊಟ್ಟಿದೆ, ನಾವು ಅದನ್ನು ಕಾಪಾಡಬೇಕು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ವಿವಿಧ ರಾಜ್ಯಗಳ ಹೈಕೋರ್ಟ್’ಗಳಿಗೆ ನ್ಯಾಯಾಧೀಶರ ನೇಮಕಾತಿ ವಿಳಂಬವಾಗುತ್ತಿರುವುದಕ್ಕೆ ಇಂದು ಮುಖ್ಯ ನ್ಯಾ.ಟಿ.ಎಸ್. ಠಾಕೂರ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದರು.

 “ಪ್ರಸ್ತುತ ಹೈಕೋರ್ಟ್’ಗಳಲ್ಲಿ 500 ನ್ಯಾಯಾಧೀಶ ಹುದ್ದೆಗಳು ಖಾಲಿಯಿವೆ. ಅವರೆಲ್ಲ ಇಂದು ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಈಗ ಆ ಸ್ಥಾನಗಳು ಖಾಲಿ ಬಿದ್ದಿವೆ. ಜೊತೆಗೆ ನ್ಯಾಯಮಂಡಳಿಗಳಿಗೆ ಸರಿಯಾದ ಸೌಲಭ್ಯವನ್ನು ಇನ್ನೂ ಒದಗಿಸಿಲ್ಲ ಹಾಗಾಗಿ ಅವು ಕೂಡಾ ಖಾಲಿ ಬಿದ್ದಿದೆ ” ಎಂದು ನ್ಯಾ. ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದರು.

click me!