
ಇವತ್ತು ಇಡೀ ಭಾರತ ಕಾರ್ಗಿಲ್ ವಿಜಯದಿನವನ್ನು ಆಚರಿಸಿದೆ. ಹುತಾತ್ಮರಾದ ಸೈನಿಕರಿಗೆ ಮತ್ತೊಂದು ಸುತ್ತು ಗೌರವ ಸಲ್ಲಿಕೆ ಮಾಡಿದೆ. ಕಾರ್ಗಿಲ್ ಯುದ್ಧದ ನಂತರ ಅದನ್ನೆ ಆಧರಿಸಿ ತಯಾರಾದ ಬಾಲಿವುಡ್ ಸಿನಿಮಾಗಳಿಗೂ ಲೆಕ್ಕ ಇಲ್ಲ.
‘ಎಲ್ ಒಸಿ ಕಾರ್ಗಿಲ್’ ಸಿನಿಮಾದ ನಿರ್ದೇಶಕ ಜೆಪಿ ದತ್ತಾ ಅವರನ್ನು ಮಾತನಾಡಿಸಿದಾಗ ಹಲವಾರು ಅಂಶಗಳು ವ್ಯಕ್ತವಾದವು. ಇಂಡೋ-ಚೀನಾ ಯುದ್ಧ ಆಧರಿಸಿ ದತ್ತಾ ಚಿತ್ರೀಕರಣ ಮಾಡಿದ ಪಲ್ಟನ್ ಸಿನಿಮಾ ಕೂಡ ಯುದ್ಧದ ಸುತ್ತಲಿನ ಕಥಾ ಹಂದರವನ್ನೇ ಹೊಂದಿದೆ. ಜೆಪಿ ದತ್ತಾ ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಕಾರ್ಗಿಲ್ ವಿಜಯ್ ದಿವಸದ ಸಂದರ್ಭದಲ್ಲಿ ಸೈನಿಕರಿಗೆ ಯಾವ ಸಂದೇಶ ನೀಡುತ್ತೀರಿ?
ದತ್ತಾ: ದೇಶದ ಗಡಿ ಕಾಯುವ ಯೋಧರು ಎಂದಿಗೂ ಚೆನ್ನಾಗಿರಬೇಕು. ಕುಟುಂಬ ದೂರ ಇಟ್ಟು ದೇಶಕ್ಕಾಗಿ ಪ್ರತಿದಿನ ದುಡಿಯುವ ಅವರಿಗೆ ದೊಡ್ಡ ಧನ್ಯವಾದ. ನಮಗೆ ಎಲ್ಲ ಸೈನಿಕರ ಪರಿಚಯ ಇಲ್ಲದೆ ಇರಬಹುದು ಆದರೆ ನಾವೆಲ್ಲರೂ ಒಂದೇ.
ಪಾಕ್‌ಗೆ ಭಾರತ ಮರೆಯಲಾಗದ ಪಾಠ ಕಲಿಸಿದ್ದು ಹೇಗೆ?
ನೀವು ಕಾರ್ಗಿಲ್ ಯುದ್ಧ ಆಧರಿಸಿ ಯಾಕೆ ಸಿನಿಮಾ ಮಾಡಿದ್ರಿ?
ದತ್ತಾ: ಸೈನ್ಯದಲ್ಲಿದ್ದ ಸ್ನೇಹಿತನೊಬ್ಬ ಯುದ್ಧದ ಸಮಯದಲ್ಲಿ ಏನೇನಾಯಿತು? ಎಂಬುದನ್ನು ವಿವರಿಸಿದ್ದ. ತ್ಯಾಗ ಬಲಿದಾನದ ಕತೆ ಒಂದು ಕಡೆಯಾದರೆ ದೇಶಕ್ಕಾಗಿ ರಕ್ತ ಹರಿಸಿದ ಸೈನಿಕರ ಕತೆ ಇನ್ನೊಂದು ಕಡೆ. ಈ ಎಲ್ಲ ನೈಜ ಕತೆಯನ್ನು ಜನರಿಗೆ ತಲುಪಿಸುವುದು ಒಂದು ಕಡೆಯಾದರೆ ಹುತಾತ್ಮರಾದವರಿಗೆ ಗೌರವ ಸಲ್ಲಿಸುವುದು ನನ್ನ ಕರ್ತವ್ಯ ಎಂದು ಭಾಸವಾಯಿತು.
ಬಾಲಿವುಡ್ ನಲ್ಲಿ ಪಾಕ್ ಕಲಾವಿದರು ನಟನೆ ಮಾಡಿದ್ರೆ ದೇಶ ಕಾಯುವ ಸೈನಿಕನ ಮನಸ್ಸಿಗೆ ಧಕ್ಕೆ ಆಗುವುದಿಲ್ಲವೆ?
ದತ್ತಾ: ಖಂಡಿತ.. ದೇಶದ ಗಡಿಯಲ್ಲಿ ನಿಂತು ಸದಾ ಹದ್ದಿನ ಕಣ್ಣಿಟ್ಟಿರುವ ಸೈನಿಕನ ಮನಸ್ಸಿಗೆ ವೈರಿ ದೇಶದವರೇ ಇಲ್ಲಿ ಬಂದು ಅಭಿನಯಿಸುವ ವಿಚಾರ ಧಕ್ಕೆ ತರುತ್ತದೆ. ಆದರೆ ಸದ್ಯ ನಾವು ಏನು ಮಾಡದ ಸ್ಥಿತಿಯಲ್ಲಿದ್ದೇವೆ.
19 ವರ್ಷವಾದರೂ ಕಾರ್ಗಿಲ್ ಯೋಧನಿಗೆ ಸಿಕ್ಕಿಲ್ಲ ಸ್ವಂತ ಸೂರು!
ನೀವು ಯುದ್ಧದ ಕತೆ ಆಧರಿಸಿದ ಸಿನಿಮಾವನ್ನೇ ಯಾಕೆ ಜಾಸ್ತಿ ಮಾಡುತ್ತೀರಿ?
ದತ್ತಾ: ಜನರ ಹೃದಯಕ್ಕೆ ಹತ್ತಿರವಾಗುವ ಸಿನಿಮಾ ನಿರ್ಮಾಣಕ್ಕೆ ನನ್ನ ಮೊದಲ ಆದ್ಯತೆ. ಅಲ್ಲದೇ ನನ್ನ ಚಿಕ್ಕಪ್ಪ ಸಹ ಸೇನೆಯಲ್ಲಿದ್ದವರಾಗಿದ್ದರು. ಜನರ ಕತೆಯನ್ನು ನಾನು ಆಯ್ಕೆ ಮಾಡುತ್ತೆನೆ ಹೊರತು ನಾನು ಆಯ್ಕೆ ಮಾಡಿದ ಕತೆಯನ್ನು ಜನರ ಮೇಲೆ ಹೇರುವುದಿಲ್ಲ.
ಸೇನೆ ಮೇಲೆ ಈ ರೀತಿಯ ವಿಶೇಷ ಅಭಿಮಾನಕ್ಕೆ ಕಾರಣ ಏನು?
ದತ್ತಾ: ನಾನು ಸಿನಿಮಾ ಮಾಡುವ ವೇಳೆ ಈ ರೀತಿಯ ವಿಚಾರಗಳನ್ನು ಜಾಸ್ತಿ ತಲೆಗೆ ಹಚ್ಚಿಕೊಳ್ಳುವುದಿಲ್ಲ. ಆದರೆ ನಾನು ಮಾಡುತ್ತಿರುವ ಕೆಲಸ ನನ್ನನ್ನು ನಂಬಿಕೊಂಡು ಬಂದವರಿಗೆ ಒಂದು ಬಗೆಯ ಸ್ಫೂರ್ತಿ ನೀಡುವಂತೆ ಇರಬೇಕು.
ರಾಷ್ಟ್ರಕ್ಕೇ ಮಾದರಿಯಾಗಿದ್ದಾನೆ ಉಡುಪಿಯ ಈ ಯೋಧ ಕಾರ್ತೀಕ್ ಪೂಜಾರಿ
ನಿಮ್ಮ ಮುಂದಿನ ಸಿನಿಮಾ ಪಲ್ಟನ್ ಅದು ಸಹ ಯುದ್ಧ ಆಧಾರಿತ ಕತೆಯದ್ದೇ. ಇದೇ ನಿಮ್ಮ ಯುದ್ಧ ಆಧಾರಿತ ಕೊನೆ ಸಿನಿಮಾ ಆಗುತ್ತದೆಯೇ?
ದತ್ತಾ: ಹಾಗೇನಿಲ್ಲ.ಇದಕ್ಕೂ ಮೊದಲು ಸಹ ನಾನು ಹೇಳಿದ್ದೆ. ಯುದ್ಧ ಭೂಮಿಯ ಅನೇಕ ಹೀರೋಗಳ ಬಗ್ಗೆ ಇನ್ನು ಹೇಳಲೇಬೇಕಾದ ಬಹಳಷ್ಟು ಕತೆಗಳಿವೆ.
ಒಂದು ದಶಕದ ನಂತರ ಪಲ್ಟನ್ ತೆರೆಗೆ ಬರುತ್ತಿದೆ? ಯಾಕೆ ಇಷ್ಟೊಂದು ಸಮಯ ಹಿಡಿಯಿತು?
ದತ್ತಾ: ಅದಕ್ಕೆ ಹಲವಾರು ಕಾರಣ ಇದೆ. ಈ ನಡುವೆ ನಾನು ನನ್ನ ತಂದೆ ಕಳೆದುಕೊಂಡೆ. ತಡವಾಯಿತು ಎನ್ನುವುದಕ್ಕಿಂತ ಈಗ ಕಾಲ ಕೂಡಿ ಬಂತು ಎಂದೇ ಹೇಳಬಹುದು.
ನಿಮ್ಮ ನೆಚ್ಚಿನ ದೇಶಭಕ್ತಿ ಗೀತೆ ಯಾವುದು?
ದತ್ತಾ: ನನ್ನ ಮೊದಲ ಚಿತ್ರ ಸರಹದ್ ಗಾಗಿ ಸಹೀರ್ ಸಾಹಿರ್-ಲುಧಿಯಾನ್ವಿ ಬರೆದ ‘ಬಾಂಬ್ ಯಾ ಗಿರೆ ಯಾ ವಹಾ...ಕೋಖ್ ಧರತಿ ಕೀ ಬಂಜ್ ಹೋತಿ ಹೈ’ ಯೇ ಬಾಂಬ್ ನಹಿ ಗಿರೆ ತೋ ಬೆಹತರ್ ಹೈ.. ಹಾಡು ನನ್ನ ಅಚ್ಚು ಮೆಚ್ಚಿನ ಗೀತೆ.
ಇಂಗ್ಲಿಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.