JNU ಪ್ರವೇಶ ಪರೀಕ್ಷೆ ಪಾಸಾದ ಸೆಕ್ಯೂರಿಟಿ ಗಾರ್ಡ್: IASಗಾಗಿ ವರ್ಕಿಂಗ್ ಹಾರ್ಡ್!

By Web DeskFirst Published Jul 16, 2019, 5:37 PM IST
Highlights

ಈತ ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್| JNU ಪ್ರವೇಶ ಪರೀಕ್ಷೆ ಪಾಸಾದ ರಾಮಜಲ್ ಮೀನಾ| ಬಿ.ಎ ಪದವಿ ವ್ಯಾಸಾಂಗ ಮಾಡುತ್ತಿರುವ ರಾಮಜಲ್ ಮೀನಾ| ರಾಜಸ್ಥಾನ ಮೂಲದ ರಾಮಜಲ್ ಮೀನಾ JNU ಸೆಕ್ಯೂರಿಟಿ ಗಾರ್ಡ್| IAS ಪಾಸಾಗುವ ರಾಮಜಲ್ ಮೀನಾ ಕನಸು ಈಡೇರಲಿ| 

ನವದೆಹಲಿ(ಜು.16): ಈತನ ಹೆಸರು ರಾಮಜಲ್ ಮೀನಾ. ಈತನ ವೃತ್ತಿ ದೇಶದ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸೆಕ್ಯೂರಿಟಿ ಗಾರ್ಡ್. ನಿತ್ಯ ವಿವಿಯ ಗೇಟ್ ಕಾಯುವ ರಾಮಲಾಲ್, ಇದೀಗ ಅದೇ ವಿವಿಯ ವಿದ್ಯಾರ್ಥಿ.

ಹೌದು, JNUವಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ರಾಮಜಲ್ ಮೀನಾ, ವಿವಿಯ ಪ್ರವೇಶ ಪರೀಕ್ಷೆ ಪಾಸಾಗಿ ಬಿ.ಎ ಪದವಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ.

Delhi: Ramjal Meena,a security guard at Jawaharlal Nehru University(JNU) has cleared JNU entrance examination for admission into BA Russian (Hons).He says,"I come from a village in Rajasthan.I was a bright student but I couldn't continue my education due to financial constraints" pic.twitter.com/F8y7w9xJlu

— ANI (@ANI)

ರಷ್ಯನ್ ಭಾಷೆಯಲ್ಲಿ ಬಿ.ಎ ವ್ಯಾಸಾಂಗ ಮಾಡುತ್ತಿರುವ ರಾಮಜಲ್ ಮೀನಾ, ಮೂಲತಃ ರಾಜಸ್ಥಾನದವರು. ಅಲ್ಲದೇ ರಾಜಸ್ಥಾನ ವಿವಿಯಿಂದ ಪದವಿ ಕೂಡ ಪಡೆದಿದ್ದಾರೆ.

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಕ್ಕೆ ನೆರವಾಗಲು ರಾಮಜಲ್  ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಉನ್ನತ ವ್ಯಾಸಾಆಂಗ ಮಾಡಬೇಕು ಎಂಬ ಆತನ ಹಂಬಲ ಮಾತ್ರ ಇನ್ನೂ ಜೀವಂತವಾಗಿಯೇ ಇದೆ.

JNU security guard, who cracked university's entrance exam, will study Russian language

Read Story | https://t.co/YqlGmUOEzR pic.twitter.com/GtjMDFJzFs

— ANI Digital (@ani_digital)

ಯುಪಿಎಸ್’ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿರುವ ರಾಮಜಲ್, ಇದಕ್ಕಾಗಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಅವರ ಪರಿಶ್ರಮ ಫಲ ನೀಡಿ ಅವರ ಕನಸು ನನಸಾಗಲಿ ಎಂಬುದೇ ಎಲ್ಲರ ಹಾರೈಕೆ.

click me!