
ನವದೆಹಲಿ (ಸೆ.01): ಕಾಶ್ಮೀರ ಕಣಿವೆ ಪ್ರದೇಶದ ಕೆಲವು ಭಾಗಗಳಲ್ಲಿ ಈದ್ ಪ್ರಾರ್ಥನೆ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿಗಳು ಮತ್ತು ಯುವಕರ ನಡುವೆ ಗಲಾಟೆ ನಡೆದಿದೆ.
ಶ್ರೀನಗರ, ಅನಂತ್ ನಾಗ್, ಸೋಪೋರ್ ಪ್ರದೇಶದಲ್ಲಿ ಈದ್ ಪ್ರಾರ್ಥನೆ ವೇಳೆ ಗಲಾಟೆ ನಡೆದಿದೆ.
ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಬಳಿಕ ಯುಕರ ಗುಂಪೊಂದು ಭದ್ರತಾ ಪಡೆಗಳ ಕಡೆ ಇದ್ದಕ್ಕಿದ್ದಂತೆ ಕಲ್ಲೆಸೆತ ಶುರು ಮಾಡಿದರು. ಈದ್ ಮಿಲಾದ್ ಪ್ರಯುಕ್ತ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿದ್ದ ಭದ್ರತಾ ಪಡೆಗಳ ಕಡೆ ಯುವಕರ ಗುಂಪು ಕಲ್ಲೆಸೆದಿದ್ದಾರೆ. ತಕ್ಷಣ ಕಾರ್ಯ ನಿರತವಾದ ಭದ್ರತಾ ಪಡೆಗಳು ಪ್ರತಿಭಟನಾಕಾರರ ಕಡೆ ಅಶ್ರುವಾಯು ಸಿಡಿಸಿದ್ದಾರೆ. ಭದ್ರತಾ ಪಡೆಗಳು ಹೆಚ್ಚಿನ ಬಿಗಿ ಭದ್ರತೆ ಮಾಡಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.