ದೇವೇಗೌಡರನ್ನು ಹೊಗಳಿದ ಡಿಕೆಶಿ: ನಾವೆಲ್ಲ ಎರಡನೆ ದರ್ಜೆಯಲ್ಲಿ ಇದ್ದೇವೆ,ಸಿಎಂ ಆಗುವುದು ಅಷ್ಟು ಸುಲಭವಲ್ಲ ಎಂದ ಗೌಡರು

Published : Sep 02, 2017, 05:34 PM ISTUpdated : Apr 11, 2018, 12:42 PM IST
ದೇವೇಗೌಡರನ್ನು ಹೊಗಳಿದ ಡಿಕೆಶಿ: ನಾವೆಲ್ಲ ಎರಡನೆ ದರ್ಜೆಯಲ್ಲಿ ಇದ್ದೇವೆ,ಸಿಎಂ ಆಗುವುದು ಅಷ್ಟು ಸುಲಭವಲ್ಲ ಎಂದ ಗೌಡರು

ಸಾರಾಂಶ

.ಡಿಕೆಶಿ, ಆರ್.ಅಶೋಕ್, ಎಚ್​ಡಿಕೆ ಯಾರಾದ್ರೂ ಸಿಎಂ ಆಗಲಿ. ಅವರವರ ಹಣೆಬರಹ ಹೇಗಿದೆಯೋ ಹಾಗೇ ಆಗಲಿ.

ಬೆಂಗಳೂರು(ಸೆ.02): ಪರಸ್ಪರ ರಾಜಕೀಯ ವಿರೋಧಿಗಳಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಒಂದೇ ವೇದಿಕೆಯಲ್ಲಿ ಪರಸ್ಪರ ಹೊಗಳಿಕೊಂಡ ಸಂದರ್ಭ ಒದಗಿಬಂತು.    

ಬೆಂಗಳೂರಿನ ವಿವಿ ಪುರಂನ ಒಕ್ಕಲಿಗರ ಸಂಘದಲ್ಲಿ ಕೃಷಿಕ್​ ಸರ್ವೋದಯ ಫೌಂಡೇಶನ್​ ಬೆಳ್ಳಿ ಮಹೋತ್ಸವದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯದಲ್ಲಿ ಯಾರಾದರೂ ಸಿಎಂ ಆಗಲಿ.ಡಿಕೆಶಿ, ಆರ್.ಅಶೋಕ್, ಎಚ್​ಡಿಕೆ ಯಾರಾದ್ರೂ ಸಿಎಂ ಆಗಲಿ. ಅವರವರ ಹಣೆಬರಹ ಹೇಗಿದೆಯೋ ಹಾಗೇ ಆಗಲಿ. ಅಷ್ಟು ಸುಲಭವಾಗಿ ಸಿಎಂ ಆಗಲು ಬಿಡ್ತಾರೆ ಅಂತ ತಿಳಿದುಕೊಳ್ಳಬೇಡಿ.ಸಿಎಂ ಆಗಲು ಅಷ್ಟು ಸುಲಭ ಇಲ್ಲ, ನಾನು ಅನುಭವದಿಂದ ಹೇಳಿದ್ದೇನೆ. ನಾವು ಎರಡನೇ ದರ್ಜೆಯಲ್ಲಿ ಇದ್ದೇವೆ.ನಮ್ಮನ್ನು ಮೊದಲ ದರ್ಜೆಗೆ ಹೋಗುವುದಕ್ಕೆ ಬಿಡುವುದಿಲ್ಲ' ಎಂದು ಹೇಳಿದರು.

ಇದೇ ಸಮಾರಂಭದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ದೇವೇಗೌಡರನ್ನು ನೋಡಿ ನಮಸ್ಕರಿಸಿದ ನಂತರ ಮಾತನಾಡಿದರು. ದೇವೇಗೌಡರು ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಏರಿದವರು. ಎಷ್ಟು ಮಂದಿ ಅಡೆತಡೆ ಹಾಕಿದರು ಅವರು ಸಾಧನೆ ಮಾಡಿದರು. ನನಗೂ ಸುಮಾರು ಮಂದಿ ಏಟು ಕೊಟ್ಟಿದ್ದಾರೆ. ಆದರೂ ಗಟ್ಟಿಯಾಗಿ ಇಲ್ಲಿ ನಿಂತು ಮಾತನಾಡುತ್ತಾ ಇದ್ದೇನೆ. ಯಾರು ಯಾರು ಏನೇನು ಏಟು ಕೊಟ್ಟಿದ್ದಾರೆ ಅಂತ ಗೊತ್ತಿದೆ. ಅದರಿಂದ ಹೊರಬರಲು ತಿಂಗಳುಗಳೇ ಬೇಕಾಗಬಹುದು. ನನ್ನ ಕಷ್ಟಕ್ಕೆ ಈಗ ಮಠ ಕೂಡ ಭಾಗಿಯಾಗಿದೆ. ಸ್ವಾಮೀಜಿಗಳೇ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ದೇವೇಗೌಡರ ಆಶೀರ್ವಾವಾದ ಕೂಡ ಇರಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

(ಸಾಂದರ್ಭಿಕ ಚಿತ್ರ)

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್