
ನವದೆಹಲಿ: ಬಹುನಿರೀಕ್ಷಿತ ರಿಲಾಯನ್ಸ್ ಜಿಯೋ ಫೀಚರ್ ಫೋನ್ 4G VoLTEನ್ನು ಬಿಡುಗಡೆ ಬಗ್ಗೆ ಇಂದು ಮುಕೇಶ್ ಅಂಬಾನಿ ಅಧಿಕೃತವಾಗಿ ಘೋಷಿಸಿದ್ದಾರೆ.
ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನೇ ಹುಟ್ಟಿಸಲಿರುವ ಈ ಫೋನ್ ರಿಲಾಯನ್ಸ್ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. 3 ವರ್ಷದ ಅವಧಿಗೆ ರೂ. 1500ವನ್ನು ಭದ್ರತಾ ಠೇವಣ ಮಾಡುವವರಿಗೆ ಈ ಫೋನ್ ಉಚಿತವಾಗಿ ಸಿಗಲಿದೆ. ಡಿಪಾಸಿಟನ್ನು ಮೂರು ವರ್ಷಗಳ ಬಳಿಕ ಪಡೆಯಬಹುದಾಗಿದೆ.
ಕೇವಲ 153 ರೂಪಾಯಿಗಳನ್ನು ನೀಡಿದರೆ ವಾಯ್ಸ್ ಕಾಲ್ ಹಾಗೂ ಡಾಟಾ ಪ್ಲಾನ್ ಲಭ್ಯವಿದ್ದು, 2 ದಿನಗಳಿಗೆ 24 ರೂಪಾಯಿ, 53 ರೂಪಾಯಿಗೆ ಒಂದು ವಾರ ಡಾಟಾ ಪಡೆಯಬಹುದಾಗಿದೆ. ಕೇವಲ 153 ರೂಪಾಯಿಗಳನ್ನು ನೀಡಿದರೆ ವಾಯ್ಸ್ ಕಾಲ್ ಹಾಗೂ ಡಾಟಾ ಪ್ಲಾನ್ ಲಭ್ಯವಿದ್ದು, 2 ದಿನಗಳಿಗೆ 24 ರೂಪಾಯಿ, 53 ರೂಪಾಯಿಗೆ ಒಂದು ವಾರ ಡಾಟಾ ಪಡೆಯಬಹುದಾಗಿದೆ.
ಇಂದು ಕಂಪನಿಯ 40ನೇ ವಾರ್ಷಿಕ ಮಹಾಸಭೆಯಲ್ಲಿ ಶೇರುದಾರರನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್ ಅಂಬಾನಿ, ಮುಂಬರುವ ಆಗಸ್ಟ್ 15ರಿಂದ ಭಾರಕ್ಕೆ ಡಿಜಿಟಲ್ ಸ್ವಾತಂತ್ರ್ಯ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಜಿಯೋ ಫೋನ್ ಕ್ರಾಂತಿಕಾರಕ ಫೋನ್ ಆಗಿದ್ದು, ಇದು ಫೀಚರ್ ಫೋನ್ ಬಳಕೆದಾರರ ಜೀವನದಲ್ಲಿ ಪರಿವರ್ತನೆ ತರಲಿದೆ.ಜಿಯೋ ಫೋನ್ ಕ್ರಾಂತಿಕಾರಕ ಫೋನ್ ಆಗಿದ್ದು, ಇದು ಫೀಚರ್ ಫೋನ್ ಬಳಕೆದಾರರ ಜೀವನದಲ್ಲಿ ಪರಿವರ್ತನೆ ತರಲಿದೆ ಎಂದು ಮುಕೇಶ್ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರ.
ಡೇಟಾ ಇಂದು ಜನರ ಜೀವನದಲ್ಲಿ ಆಮ್ಲಜನಕದ ಸ್ಥಾನ ಪಡೆದಿದೆ. ಡೇಟಾ ಬಳಕೆಯಲ್ಲಿ ಭಾರತವು ಅಮೆರಿಕಾ ಹಾಗೂ ಚೀನಾವನ್ನೂ ಹಿಂದಿಕ್ಕಿದೆ ಎಂದು ಅವರು ಹೇಳಿದರು. ಜಿಯೋ ಫೋನ್ ಕ್ರಾಂತಿಕಾರಕ ಫೋನ್ ಆಗಿದ್ದು, ಇದು ಫೀಚರ್ ಫೋನ್ ಬಳಕೆದಾರರ ಜೀವನದಲ್ಲಿ ಪರಿವರ್ತನೆ ತರಲಿದೆ.
ಜಿಯೋ ನೆಟ್ವರ್ಕ್ ದೇಶದ ಮೂಲೆಮೂಲೆಗೂ ವ್ಯಾಪಿಸಿದ್ದು, ಭಾರತದ ಶೇ.99 ಜನಸಂಖ್ಯೆಯನ್ನು ಒಳಗೊಂಡಿದೆ. ಈ ವರ್ಷ ಕೊನೆಯಲ್ಲಿ ನಿಯರ್ ಫೀಲ್ಡ್ ಕಮ್ಯೂನಿಕೇಶನ್ (NFC) ತಂತ್ರಜ್ಞಾನವನ್ನು ಕೂಡಾ ಪರಿಚಯಿಸಲಾಗುವುದು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ರಿಲಾಯನ್ಸ್ ದಾಖಲೆಯ ಮೇಲೆ ಇನ್ನೊಂದು ದಾಖಲೆಯನ್ನು ನಿರ್ಮಿಸುತ್ತಿದೆ ಎಂದ ಅಂಬಾನಿ, ಕಳೆದ ದಿನಗಳಲ್ಲಿ ಜಿಯೋ ಪ್ರತಿ ಸೆಕಂಡಿಗೆ 7 ಹೊಸ ಗ್ರಾಹಕರನ್ನು ಪಡೆದಿದ್ದು, 125 ಮಿಲಿಯನ್ ಗ್ರಾಹಕರನ್ನು ಹೊಂದಿದೆ ಎಂದು ಅವರು ತಿಳಿಸಿದರು.
1970ರಲ್ಲಿ 70 ಕೋಟಿಯಿದ್ದ ಕಂಪನಿಯ ಆದಾಯವು ಈಗ 3.3 ಲಕ್ಷ ಕೋಟಿಗೆ ಏರಿದೆ. ಟೆಕ್ಸ್’ಟೈಲ್ ಉದ್ಯಮದಿಂದ ಆರಂಭವಾದ ರಿಲಾಯನ್ಸ್ ಈಗ ಬಹುರೀತಿಯ ಉದ್ಯಮಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. 1977ರಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್’ನಲ್ಲಿ ಹೂಡಿದ್ದ ರೂ.1000ದ ಬೆಲೆ ಈಗ ರೂ.16.5 ಲಕ್ಷವಾಗಿದೆ. ಪ್ರತಿವರ್ಷ ಶೇರುದಾರ ಸಂಪತ್ತಿನ ಮೌಲ್ಯ ಎರಡುವರೆ ಪಟ್ಟು ವೃದ್ಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.