ಜಿಯೋ ಉಚಿತ ಸೇವೆ 2017 ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದು,ತದ ನಂತರ ಅರ್ಧದಷ್ಟು ಗ್ರಾಹಕರು ಸಿಮ್ ಬದಲಿಸುತ್ತಾರೆ ಎಂದು ಹಲವು ವರದಿಗಳು ಹೇಳುತ್ತಿವೆ. ಆದರೆ --
ನವದೆಹಲಿ(ಮಾ.19): ಭಾರತದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ದೂರವಾಣಿ ಸೇವಾ ಸಂಸ್ಥೆಯ ಜಿಯೋ ಗ್ರಾಹಕರ ಬಗ್ಗೆ ವಿಶ್ವಮಾನ್ಯ ಪತ್ರಿಗೆ ಒಂದು ಉತ್ತಮ ವರದಿಯನ್ನು ನೀಡಿದೆ.
ಜಿಯೋ ಉಚಿತ ಸೇವೆ 2017 ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದು,ತದ ನಂತರ ಅರ್ಧದಷ್ಟು ಗ್ರಾಹಕರು ಸಿಮ್ ಬದಲಿಸುತ್ತಾರೆ ಎಂದು ಹಲವು ವರದಿಗಳು ಹೇಳುತ್ತಿವೆ. ಆದರೆ ವಿಶ್ವಮಾನ್ಯ ಪತ್ರಿಕೆ 'ವಾಲ್'ಸ್ಟ್ರೀಟ್ ಜರ್ನಲ್' ಸಮೀಕ್ಷೆ ನಡೆಸಿತ್ತು. ಈ ವರದಿಯ ಪ್ರಕಾರ ಏಪ್ರಿಲ್ 1ರಿಂದ ಶುರುವಾಗುವ ಶುಲ್ಕ ಪಾವತಿಸುವ ಸೇವೆಗೆ ಬಹುತೇಕ ಗ್ರಾಹಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಯ ಪ್ರಕಾರ ಶೇ.63 ಮಂದಿ ತಾವು ಪಾವತಿಸುವ ಶುಲ್ಕಕ್ಕೆ ಬದ್ಧರಾಗಿ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರೆ, ಶೇ,28 ಮಂದಿ ತಮ್ಮ ಮೊಬೈಲ್'ನಲ್ಲಿ 2ನೇ ಸಿಮ್ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.ಕೇವಲ 2ರಷ್ಟು ಮಂದಿ ಮಾತ್ರ ಯೋಜನೆ ಕೈಬಿಡುವುದಾಗಿ ತಿಳಿಸಿದ್ದಾರೆ. ಅವರು ಸಹ ಸಾಧ್ಯವಾದರೆ ಉತ್ತಮ ಆಫರ್ ಬಂದರೆ ಸೇವೆ ಮುಂದುವರಿಸುವುದಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಶೇ.40 ಮೆಟ್ರೋ,ಶೇ.30 ಉಪ ನಗರ,ಶೇ.20 ದ್ವಿತೀಯ ದರ್ಜೆ ನಗರ ಹಾಗೂ ಶೇ.10 ಮಂದಿ ಹಳ್ಳಿಯನ್ನು ಒಳಗೊಂಡ ಪಟ್ಟಣದಲ್ಲಿ ಸಮೀಕ್ಷೆಯನ್ನು ನಡೆಸಲಾಗಿತ್ತು. ಶೇ.95 ನಗರ ಹಾಗೂ ಶೇ.5 ಗ್ರಾಮಾಂತರ ಪ್ರದೇಶದ ಜನರು ಜಿಯೋ ಸಿಮ್'ಅನ್ನು ಬಳಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಬಹುತೇಕರು 28 ಜಿಬಿಯಿರುವ ರೂ.303 ಯೋಜನೆಯನ್ನು ಬಳಸಿಕೊಳ್ಳಲಿದ್ದಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.