ಜಿಯೋ ಕಾಲ್'ಡ್ರಾಪ್ ಸಮಸ್ಯೆ: ಏರ್'ಟೆಲ್, ಐಡಿಯಾ, ವೊಡಾಫೋನ್'ಗೆ ಸಾವಿರಾರು ಕೋಟಿ ದಂಡ?

Published : Sep 27, 2016, 03:55 AM ISTUpdated : Apr 11, 2018, 12:56 PM IST
ಜಿಯೋ ಕಾಲ್'ಡ್ರಾಪ್ ಸಮಸ್ಯೆ: ಏರ್'ಟೆಲ್, ಐಡಿಯಾ, ವೊಡಾಫೋನ್'ಗೆ ಸಾವಿರಾರು ಕೋಟಿ ದಂಡ?

ಸಾರಾಂಶ

ನವದೆಹಲಿ(ಸೆ. 27): ರಿಲಯಲ್ಸ್ ಜಿಯೋ ಸಿಮ್'ನಿಂದ ನೀವು ಬೇರೆ ನೆಟ್'ವರ್ಕ್'ಗೆ ಮಾಡುವ ಕರೆಗಳು ಕನೆಕ್ಟ್ ಆಗುತ್ತಿಲ್ಲವೇ? ಇದು ಅತೀ ಹೆಚ್ಚು ಜಿಯೋ ಗ್ರಾಹಕರನ್ನು ಬಾಧಿಸುತ್ತಿರುವ ಪ್ರಶ್ನೆಯಾಗಿದೆ. ಈ ವಿಚಾರ ಇದೀಗ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ವ್ಯಾಜ್ಯವಾಗುತ್ತಿದೆ. ರಿಲಯನ್ಸ್ ಜಿಯೋ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗೆ ಎದುರಾಳಿ ಟೆಲಿಕಾಂ ಕಂಪನಿಗಳಾದ ಏರ್'ಟೆಲ್, ವೊಡಾಫೋನ್ ಮತ್ತು ಐಡಿಯಾಗಳತ್ತ ಟ್ರಾಯ್ ಬೊಟ್ಟು ಮಾಡಿದೆ. ವಾಸ್ತವವಾಗಿ ಈ ಮೂರು ನೆಟ್ವರ್ಕ್'ಗಳಿಗೆ ಜಿಯೋದಿಂದ ಮಾಡುವ ಕರೆಗಳು ಸರಿಯಾಗಿ ಕನೆಕ್ಟ್ ಆಗುತ್ತಿಲ್ಲವೆಂಬ ದೂರು ಅತೀ  ಹೆಚ್ಚು ಕೇಳಿಬರುತ್ತಿದೆ. ಒಂದು ವರದಿ ಪ್ರಕಾರ ಪ್ರತೀ ದಿನ ಜಿಯೋ ನೆಟ್ವರ್ಕ್'ನಿಂದ ಮೇಲಿನ ಮೂರು ನೆಟ್ವರ್ಕ್'ಗಳಿಗೆ ಮಾಡಲಾಗುವ 12 ಕೋಟಿ ಕರೆಗಳಿಗೆ ಕಾಲ್'ಡ್ರಾಪ್ ಸಮಸ್ಯೆ ಎದುರಾಗುತ್ತಿದೆ ಎಂಬ ಅಂದಾಜಿದೆ. ಟ್ರಾಯ್ ನಿಯಮದ ಪ್ರಕಾರ ಯಾವುದೇ ನೆಟ್ವರ್ಕ್'ನಲ್ಲಿ ಕಾಲ್'ಡ್ರಾಪ್ ಸಮಸ್ಯೆ ಶೇ. 0.5 ಮೀರಬಾರದು. ಆದರೆ, ಜಿಯೋ ವಿಚಾರದಲ್ಲಿ ಇದು ಶೇ. 80ಕ್ಕಿಂತ ಹೆಚ್ಚು ಎನ್ನಲಾಗಿದೆ. ಇದರಿಂದ ಟ್ರಾಯ್ ಸಂಸ್ಥೆಯು ಜಿಯೋ, ಏರ್'ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳ ಪ್ರತಿನಿಧಿಗಳನ್ನು ಕರೆದು ವಿಚಾರಣೆ ನಡೆಸಲಿದೆ.

ಯಾಕೆ ಕಾಲ್'ಡ್ರಾಪ್ ಸಮಸ್ಯೆ?
ಬೇರೆ ನೆಟ್ವರ್ಕ್'ನಿಂದ ಬಂದ ಕರೆಯನ್ನು ಸ್ವೀಕರಿಸಲು ಪಾಯಿಂಟ್ಸ್ ಆಫ್ ಇಂಟರ್'ಕನೆಕ್ಷನ್(ಪಿಓಐ) ಸೇವೆಯನ್ನು ಒದಗಿಸಬೇಕು. ಆದರೆ, ರಿಲಯನ್ಸ್ ಜಿಯೋದ ನೆಟ್ವರ್ಕ್'ನಿಂದ ಬರುವ ಕರೆಗೆ ಏರ್'ಟೆಲ್, ವೊಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳು ಪಿಓಐಗಳನ್ನು ಸರಿಯಾಗಿ ಒದಗಿಸುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ. ಆದರೆ, ಈ ಆರೋಪವನ್ನು ಈ ಟೆಲಿಕಾಂ ಸಂಸ್ಥೆಗಳು ಸಾರಸಗಟಾಗಿ ತಿರಸ್ಕರಿಸಿವೆ. ತಾವು ಜಿಯೋಗೋಸ್ಕರ ಸಾಕಷ್ಟು ಪಿಓಐಗಳನ್ನು ಸ್ಥಾಪಿಸಿರುವುದಾಗಿ ಇವು ಹೇಳಿಕೊಂಡಿವೆ.

ಒಂದು ವರ್ಷದ ಹಿಂದಿನ ಅಧಿಕೃತ ಮಾಹಿತಿ ಪ್ರಕಾರ ಜಿಯೋದ ಕರೆಗಳಿಗೆ ಏರ್'ಟೆಲ್, ವೊಡಾಫೋನ್ ಮತ್ತು ಐಡಿಯಾ ಸ್ಥಾಪಿಸಿದ ಪಿಓಐಗಳ ಸಂಖ್ಯೆ 651, 462 ಹಾಗೂ 523 ಇದೆ. ಟ್ರಾಯ್ ನಿಯಮದ ಪ್ರಕಾರ 4ರಿಂದ 5 ಸಾವಿರದಷ್ಟು ಪಿಓಐಗಳು ಬೇಕಾಗುತ್ತವೆ.

ತಪ್ಪಾಗಿದ್ದರೆ ಸಾವಿರಾರು ಕೋಟಿ ದಂದ?
ಏರ್'ಟೆಲ್, ಐಡಿಯಾ ಮತ್ತು ವೊಡಾಫೋನ್ ಸಂಸ್ಥೆಗಳು ಜಿಯೋ ಗ್ರಾಹಕರಿಗೆ ಉದ್ದೇಶಪೂರ್ವಕವಾಗಿ ಸರಿಯಾಗಿ ನೆಟ್ವರ್ಕ್ ಒದಗಿಸುತ್ತಿಲ್ಲವೆಂಬುದು ಸಾಬೀತಾದರೆ ಟ್ರಾಯ್ ಸಾವಿರಾರು ಕೋಟಿ ರೂ. ದಂಡ ವಿಧಿಸುವ ಸಾಧ್ಯತೆ ಇದೆ. ದಿಲ್ಲಿ ಹೈಕೋರ್ಟ್'ನ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಸಿ.ಪಟೇಲ್ ಅವರು ಈ ವಿಚಾರವಾಗಿ ಟೆಲಿಕಾಂ ಸಚಿವರಿಗೆ ಪತ್ರ ಬರೆದಿದ್ದು, ಏರ್'ಟೆಲ್, ಐಡಿಯಾ ಹಾಗೂ ವೊಡಾಫೋನ್ ಸಂಸ್ಥೆಗಳಿಗೆ ತಲಾ 3,300 ಕೋಟಿ ರೂಪಾಯಿ ದಂಡ ವಿಧಿಸಬೇಕೆಂದು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿರಿಯಾ: ಶುಕ್ರವಾರದ ನಮಾಜ್ ವೇಳೆ ಮಸೀದಿಯಲ್ಲಿ ಸ್ಫೋಟ, 8 ಸಾವು, 18 ಮಂದಿಗೆ ಗಾಯ, ಎಲ್ಲೆಡೆ ಆಂಬ್ಯುಲೆನ್ಸ್ ಸೈರನ್‌ಗಳದ್ದೇ ಸದ್ದು!
ರೋಡಲ್ಲಿ ಹೋಗುತ್ತಿದ್ದ 7 ವರ್ಷದ ಬಾಲಕಿಗೆ ಗುದ್ದಿದ ಕಾರು, 10 ಅಡಿ ದೂರಕ್ಕೆ ಹಾರಿಬಿದ್ದ ಮಗು!