
ಬೆಂಗಳೂರು(ಸೆ.27): ಇತ್ತೀಚಿನ ಯುವಜನತೆಗೆ ಬೈಕ್ ವೀಲ್ಹಿಂಗ್ ಕ್ರೇಜ್ ಜಾಸ್ತಿಯಾಗಿದೆ. ಇದ್ರಿಂದ ಎಷ್ಟೇ ಅಪಘಾತಗಳಾದ್ರೂ ಇನ್ನೂ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಇಂಥವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ನಿಮಗೆ ಬೈಕ್ ವೀಲ್ಹಿಂಗ್ ಕ್ರೇಜ್ ಇದ್ಯಾ? ಹಾಗಾದ್ರೆ ಇವಾಗ್ಲೆ ಬಿಟ್ರೆ ಒಳ್ಳೇದು. ಇಲ್ಲಾಂದ್ರೆ ಬೆಂಗಳೂರು ಸಂಚಾರಿ ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡಿ ಜೈಲಿಗಟ್ಟೋ ಚಾನ್ಸ್ ಇದೆ.
ಹೌದು ಕಳೆದ ಕೆಲ ದಿನಗಳಿಂದ ಬೆಂಗಳೂರು ಸಂಚಾರಿ ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪುಲಕೇಶಿನಗರ, ಶಿವಾಜಿನಗರ, ಬಾಣಸವಾಡಿ, ಇಂದಿರಾನಗರ, ಹಲಸೂರು ಸೇರಿ ವಿವಿಧ ಠಾಣಾ ವ್ಯಾಪ್ತೀಲಿ ಕಾರ್ಯಾಚರಣೆ ನಡೆಸಿ ವೀಲ್ಹೀಂಗ್ ಮಾಡೋರಿಗೆ ಸಖತ್ತಾಗೇ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು ಪೂರ್ವ ಸಂಚಾರ ಪೊಲೀಸರು ಕೆಲ ದಿನಗಳಿಂದ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಸಂಚಾರಿ ನಿಯಮ ಮೀರುವವರ ವಿರುದ್ಧ ಪೊಲೀಸರು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.