
ದೇವಸ್ಥಾನದ ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಿಸುತ್ತಿದೆ ಅನ್ನೋ ವದಂತಿಯಿಂದ ದೇವಾಲಯದತ್ತ ಜನರು ದೌಡಾಯಿಸಿದ್ದ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ. ಅರಸೀಕೆರೆಯ ಮಲ್ಲಿಗೆಯಮ್ಮ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಿಸುತ್ತಿದೆ ಎಂಬ ಸುದ್ದಿಯನ್ನು, ವಿಸ್ಮಯವೆಂದು ತಿಳಿದು ದೇವಸ್ಥಾನದ ಬಳಿ ನೂರಾರು ಜನರು ಜಮಾಯಿಸಿದ್ದರು. ಗೆಜ್ಜೆನಾದವನ್ನ ಕೇಳಲು ಬೆಳಗ್ಗಿನ ಜಾವದಲ್ಲೂ ಸಾರ್ವಜನಿಕರು ಕೌತುಕದಿಂದ ನೆರೆದಿದ್ದರು.ಅಲ್ಲದೇ ಗೆಜ್ಜೆನಾದದ ಶಬ್ದವನ್ನು ಸ್ಥಳೀಯರು, ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ. ೧೫ ವರ್ಷಗಳ ಹಿಂದೆಯೂ ಮಲ್ಲಿಗೆಯಮ್ಮ ದೇವಾಲಯದ ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಿಸಿತ್ತೆಂತು ಸ್ಥಳೀಯರು ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.