
ಚಿಕ್ಕಮಗಳೂರು (ಡಿ.28): ಪ್ರಧಾನಿ ನರೇಂದ್ರ ಮೋದಿಗೆ ಸೆಡ್ಡು ಹೊಡೆದು ಗುಜರಾತ್‍ನಲ್ಲಿ ಶಾಸಕರಾಗಿರೋ ಜಿಗ್ನೇಶ್ ಮೇವಾನಿ ಸ್ವಾಗತಕ್ಕೆ ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಗೌರಿ ಲಂಕೇಶ್ ಸ್ಮರಣಾರ್ಥ ಬೃಹತ್ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೋಮು ಸೌಹಾರ್ದ ವೇದಿಕೆ 15 ವರ್ಷ ಪೂರೈಸಿದ ಹಿನ್ನೆಲೆ ಇಂದು ಮತ್ತು ನಾಳೆ ಬೃಹತ್ ಸಮಾವೇಶಕ್ಕೆ ಕಾಫಿನಾಡು ಸಜ್ಜಾಗಿದೆ. ‘ಬಾಬಾಬುಡನ್ ಗಿರಿಯನ್ನ ಅಯೋಧ್ಯೆಯಾಗಲು ಬಿಡಲಿಲ್ಲ, ಕರ್ನಾಟಕ ಗುಜರಾತ್ ಆಗೋಕು ಬಿಡಲ್ಲ, ಗೌರಿ ಲಂಕೇಶ್ ಹತ್ಯೆ ವ್ಯರ್ಥವಾಗೋದಿಲ್ಲ’ ಎಂಬ ಘೋಷಣೆಯಡಿ ಸೌಹಾರ್ದ ಮಂಟಪದ ವೇದಿಕೆ ಸಜ್ಜಾಗಿದೆ. ಈ ಕಾರ್ಯಕ್ರಮಕ್ಕೆ ಗುಜರಾತ್‍ನಿಂದ ಆಗಮಿಸುತ್ತಿರುವ ನೂತನ ಶಾಸಕ ಜಿಗ್ನೇಶ್ ಮೇವಾ , ತೀಸ್ತಾ ಸೆಟ್ಲವಾಡ್, ಪ್ರಕಾಶ್ ರೈ ಹಾಗೂ ಅರುಂಧತಿ ರಾಯ್ ಮತ್ತು ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.