ಡಿನೋಟಿಫಿಕೇಶನ್ ಪ್ರಕರಣ: ಕಾಂಗ್ರೆಸ್, ಬಿಜೆಪಿ ವಿರುದ್ಧ ಜೆಡಿಎಸ್ ವಾಗ್ದಾಳಿ

Published : Aug 21, 2017, 04:51 PM ISTUpdated : Apr 11, 2018, 12:47 PM IST
ಡಿನೋಟಿಫಿಕೇಶನ್ ಪ್ರಕರಣ: ಕಾಂಗ್ರೆಸ್, ಬಿಜೆಪಿ ವಿರುದ್ಧ ಜೆಡಿಎಸ್ ವಾಗ್ದಾಳಿ

ಸಾರಾಂಶ

ಡಾ.ಶಿವರಾಮಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದಲ್ಲಿ  2013 ರಲ್ಲೇ ಡಾ.ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೇಶನ್ ನಲ್ಲಿ ನಡೆದಿರೋ ಅಕ್ರಮಗಳ ಬಗ್ಗೆ ವರದಿ ತಯಾರಿಸಲು ಸರ್ಕಾರ 2012ರ ಕೊನೆಯಲ್ಲಿ ಐಎಎಸ್ ಅಧಿಕಾರಿಗಳ ಸಮಿತಿ ರಚನೆ ಮಾಡಿತ್ತು. ನಂತರ 2013ರಲ್ಲಿ ಆ ಸಮಿತಿಯ ವರದಿಯಲ್ಲಿ ಉನ್ನತ ಅಧಿಕಾರಿಗಳು ಅಕ್ರಮ ಎಸಗಿರುವುದು  ಸಾಬೀತಾಗಿದೆ ಎಂದು ಉಲ್ಲೇಖವಾಗಿತ್ತು. ಆದರೆ 4 ವರ್ಷದಿಂದ ಕ್ರಮ ಕೈಗೊಳ್ಳದ ಸರ್ಕಾರ ಈಗ ಕ್ರಮ ಕೈಗೊಳ್ಳುತ್ತಿರುವುದರ ಹಿಂದಿನ ದ್ದೇಶವೇನು ಎಂದು ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಬೋಜೇಗೌಡ ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರು: ಬಿಎಸ್.ಯಡಿಯೂರಪ್ಪ ವಿರುದ್ಧದ ಎಸಿಬಿ ಎಫ್ಐಆರ್​ ಗೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ. 

ಡಾ.ಶಿವರಾಮಕಾರಂತ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದಲ್ಲಿ  2013 ರಲ್ಲೇ ಡಾ.ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೇಶನ್ ನಲ್ಲಿ ನಡೆದಿರೋ ಅಕ್ರಮಗಳ ಬಗ್ಗೆ ವರದಿ ತಯಾರಿಸಲು ಸರ್ಕಾರ 2012ರ ಕೊನೆಯಲ್ಲಿ ಐಎಎಸ್ ಅಧಿಕಾರಿಗಳ ಸಮಿತಿ ರಚನೆ ಮಾಡಿತ್ತು. ನಂತರ 2013ರಲ್ಲಿ ಆ ಸಮಿತಿಯ ವರದಿಯಲ್ಲಿ ಉನ್ನತ ಅಧಿಕಾರಿಗಳು ಅಕ್ರಮ ಎಸಗಿರುವುದು  ಸಾಬೀತಾಗಿದೆ ಎಂದು ಉಲ್ಲೇಖವಾಗಿತ್ತು. ಆದರೆ 4 ವರ್ಷದಿಂದ ಕ್ರಮ ಕೈಗೊಳ್ಳದ ಸರ್ಕಾರ ಈಗ ಕ್ರಮ ಕೈಗೊಳ್ಳುತ್ತಿರುವುದರ ಹಿಂದಿನ ದ್ದೇಶವೇನು ಎಂದು ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಬೋಜೇಗೌಡ ಪ್ರಶ್ನಿಸಿದ್ದಾರೆ.

ಐಎಎಸ್ ಅಧಿಕಾರಿ ಉಮೇಶ್ ನೇತೃತ್ವದ ತಂಡ ವರದಿ ಸಲ್ಲಿಸಿ ನಾಲ್ಕು ವರ್ಷ ಕಳೆದ್ರು ವರದಿ ಜಾರಿಯಾಗಿಲ್ಲ. ಇನ್ನು ಸರ್ಕಾರ ನಾಲ್ಕು ವರ್ಷ ಕಳೆದ ಮೇಲೆ ಎಸಿಬಿಯಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದು ರಾಜಕೀಯ ಗಿಮಿಕ್ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಬೋಜೆಗೌಡ, ಬಿಜೆಪಿಯು ರಸ್ತೆಯಲ್ಲಿ ಹೋರಾಟ ಮಾಡುವ ಮೂಲಕ ತಮ್ಮ ನಾಯಕರನ್ನು ರಕ್ಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಖಾತೆಗೆ ಯಾವಾಗ ಬರುತ್ತೆ ಹಣ? ಇಲ್ಲಿದೆ ವಿವರ
ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು