
ಮಂಡ್ಯ(ಜ.29): ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಜೆಡಿಎಸ್ ಪಕ್ಷ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಾ ಕಾರ್ಯಕರ್ತ ಸಭೆ ನಡೆಸಿ ೨೦೧೮ಕ್ಕೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯಗತ ಪ್ರಯತ್ನ ನಡೆಸ್ತಿದ್ದಾರೆ. ಇದರ ನಡುವೆ ಪಕ್ಷದ ದೊಡ್ಗೌಡ್ರು ಪಕ್ಷವನ್ನು ಅಧಿಕಾರಕ್ಕೆಗಳು ದೇವರ ಮೊರೆ ಹೋಗಿದ್ದು ಪೂಜೆ ಪುನಸ್ಕಾರ ಮೂಲಕ ದೇವರ ಶಕ್ತಿ ಪಡೆದು ಪಕ್ಷ ವನ್ನು ಅಧಿಕಾರ ಯತ್ನ ನಡೆಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ೨೦-೨೦ ಸರ್ಕಾರದ ನಂತರ ಅಧಿಕಾರವಿಲ್ಲದೆ ಕಂಗೆಟ್ಟಿರುವ ಜೆಡಿಎಸ್ ಪಕ್ಷ, ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಇನ್ನಿಲ್ಲ ಪ್ರಯತ್ನ ನಡೆಸ್ತಿದೆ.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ್ರು ಮತ್ತೆ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ದೇವರ ಮೊರೆ ಹೋಗಿದ್ದು ಆ ಮೂಲಕ ದೇವರ ಶಕ್ತಿಯಿಂದ ಪಕ್ಷವನ್ನು ಅಧಿಕಾರಕ್ಕೆ ತರು ಶತಾಯಗತ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶ್ರೀ ಚುಂಚನಗಿರಿಯ ಶ್ರೀ ಕ್ಷೇತ್ರದ ಶ್ರೀ ಕಾಲ ಭೈರವೇಶ್ವರನ ಮೊರೆ ಹೋಗಿದ್ದು, ಅಲ್ಲಿ ಅಮವಾಸ್ಯೆ ಪೂಜೆಗೆ ಮುಂದಾಗಿದ್ದಾರೆ. ಈಗಾಗಲೇ ಕಳೆದ ಡಿ-೨೯ ರಂದು ಆದಿ ಚುಂಚನಗಿರಿಯಲ್ಲಿ ದೊಡ್ಗೌಡ್ರು ಮೊದಲ ಅಮವಾಸ್ಯೆ ಪೂಜೆ ಹಾಗೂ ಜ-೨೭ ರಂದು ಎರಡನೆ ಅಮವಾಸ್ಯೆ ನಡೆಸಿದ್ದಾರೆ.
ಇನ್ನು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವಗೌಡ್ರು ಬಹಳ ಆಸ್ತಿಕರು. ಈ ನಿಟ್ಟಿನಲ್ಲಿ ಅವರು ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲು ದೈವ ಬಲದ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕಾಗಿ ಅವರು ಈ ಬಾರಿ ಆದಿ ಚುಂಚನಗಿರಿಯ ಶ್ರೀ ಕ್ಷೇತ್ರದ ಶಕ್ತಿ ದೇವರೆನಿಸಿದ ಶ್ರೀ ಕಾಲ ಭೈರವೇಶ್ವರ ಸ್ವಾಮಿಯ ಮೊರೆ ಹೋಗಿದ್ದಾರೆ. ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ಮೂರು ಅಮವಾಸ್ಯೆ ಪೂಜೆ ನಡೆಸಿದ್ರೆ ಇಷ್ಟಾರ್ಥ ಸಿದ್ದಿಸುವುದೆಂಬ ಜ್ಯೋತಿಷಿಯವರ ಮಾತಿನಂತೆ ಈಗ ದೊಡ್ಗೌಡ್ರು ಚುಂಚನಗಿರಿಯ ಕಾಲ ಭೈರವೇಶ್ವರನ ಸನ್ನಿಧಾನದಲ್ಲಿ ಈಗಾಗಲೇ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಎರಡು ಅಮವಾಸ್ಯೆ ಪೂಜೆ ನೆರವೇರಿಸಿದ್ದಾರೆ. ಅಲ್ಲದೆ ಮೂರನೇ ಅಮವಾಸ್ಯೆ ಸಿದ್ಧತೆ ನಡೆಸ್ತಿದ್ದಾರೆ. ಅಮವಾಸ್ಯೆ ಪೂಜೆ ಮಾಡಿಸಿ ಕಾಲಭೈರವೇಶ್ವರ ಶಕ್ತಿ ಪಡೆದು ಮುಂದಿನ ದಿನದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರೋದಾಗಿ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಹೇಗಾದರೂ ಮಾಡಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಬಯಕೆ hdk &hdd ಯವರದಾಗಿದ್ದು ಇಬ್ಬರು ಶತಾಯಗತ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ. ಅಂತಿಮವಾಗಿ ದೇವೇಗೌಡ ಮತ್ತು ಕುಮಾರಸ್ವಾಮಿಯ ಯಾವ ವರ್ಕೌಟ್ ಜೆಡಿಎಸ್ ಪಕ್ಷದ ಕೈ ಹಿಡಿಯುತ್ತದೋ ಕಾದು ನೋಡಬೇಕಷ್ಟೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.