ಅಮೆರಿಕಾದಲ್ಲಿ ಶುರುವಾಯ್ತಾ ಪ್ರತೀಕಾರದ ಕಿಚ್ಚು: ಧ್ವಂಸವಾಯ್ತು ಮಸೀದಿ

Published : Jan 28, 2017, 07:14 PM ISTUpdated : Apr 11, 2018, 01:00 PM IST
ಅಮೆರಿಕಾದಲ್ಲಿ ಶುರುವಾಯ್ತಾ ಪ್ರತೀಕಾರದ ಕಿಚ್ಚು: ಧ್ವಂಸವಾಯ್ತು ಮಸೀದಿ

ಸಾರಾಂಶ

ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಲೇ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಂಭದಿಸಿದಂತೆ ನಿನ್ನೆಯಷ್ಟೇ 7 ಮುಸ್ಲಿಮ್ ದೇಶಗಳ ನಾಗರಿಕರಿಗೆ ಅಮೆರಿಕಾ ಪ್ರವೇಶನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ಆದೇಶ ಜಾರಿಗೊಳಿಸಲು ಟ್ರಂಪ್ ಇದೀಗ ಸಹಿ ಹಾಕಿದ್ದು, ಇವರ ಮೊಹರು ಬೀಳುತ್ತಿದ್ದಂತೆಯೇ ಅಮೆರಿಕಾದ ಮಸೀದಿಯೊಂದು ಮುಸ್ಲಿಂ ವಿರೋಧಿಗಳ ಆಕ್ರೋಶಕ್ಕೆ ಬಲಿಯಾಗಿ ಬೆಂಕಿಗಾಹುತಿಯಾಗಿದೆ.

ಟೆಕ್ಸಾಸ್(ಜ.29): ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಲೇ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಂಭದಿಸಿದಂತೆ ನಿನ್ನೆಯಷ್ಟೇ 7 ಮುಸ್ಲಿಮ್ ದೇಶಗಳ ನಾಗರಿಕರಿಗೆ ಅಮೆರಿಕಾ ಪ್ರವೇಶನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ಆದೇಶ ಜಾರಿಗೊಳಿಸಲು ಟ್ರಂಪ್ ಇದೀಗ ಸಹಿ ಹಾಕಿದ್ದು, ಇವರ ಮೊಹರು ಬೀಳುತ್ತಿದ್ದಂತೆಯೇ ಅಮೆರಿಕಾದ ಮಸೀದಿಯೊಂದು ಮುಸ್ಲಿಂ ವಿರೋಧಿಗಳ ಆಕ್ರೋಶಕ್ಕೆ ಬಲಿಯಾಗಿ ಬೆಂಕಿಗಾಹುತಿಯಾಗಿದೆ.

ಅತ್ತ ವೈಟ್'ಹೌಸ್'ನಲ್ಲಿ ಕುಳಿತ ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಂ ನಾಗರಿಕರ ಪ್ರವೇಶ ನಿರ್ಭಂದಿಸಿದ ಆದೇಶಕ್ಕೆ ಸಹಿ ಹಾಕುತ್ತಿದ್ದಂತೆಯೇ ಇತ್ತ ಕೆಲ ದುಷ್ಕರ್ಮಿಗಳು ಟೆಕ್ಸಾಸ್'ನಲ್ಲಿರುವ ಮಸೀದಿಯೊಂದರ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಡೈಲಿ ಮೇಲ್ ಬಿತ್ತರಿಸಿದ ಸುದ್ದಿಯನ್ವಯ ಧಾರ್ಮಿಕ ಮತಾಂಧರಿಂದ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಮಸೀದಿಯ ಮೌಲ್ವಿಗಳು ರಾತ್ರಿ ಸುಮಾರು 2 ಗಂಟೆಗೆ ಇಸ್ಲಾಮಿಕ್ ಸೆಂಟರ್ ಆಫ್ ವಿಕ್ಟೋರಿಯಾದಿಂದ ಹೊಗೆ ಹೊರಬರುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸುವ ವೇಳೆಗೆ ಮಸೀದಿ ಸಂಪೂರ್ಣವಾಗಿ ಧ್ವಂಸಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುವುದೇ ಸಮಾಧಾನದ ವಿಚಾರ.

ಡೊನಾಲ್ಡ್ ಟ್ರಂಪ್'ರವರ ಈ ಆದೇಶಕ್ಕೆ ಜಗತ್ತಿನಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಆದರೆ 'ಮುಸ್ಲಿಂ ಆತಂಕವಾದಿಗಳಿಂದ ವಿಶ್ವಕ್ಕೇ ಆಪತ್ತು ಕಾದಿದೆ' ಎಂದು ಹೇಳಿ ಈ ಆದೇಶಕ್ಕೆ ಸಹಿ ಹಾಕಿದ್ದರು. ಇದರ ಬೆನ್ನಲ್ಲೇ ಮಸೀದಿಯ ಮೇಲೆ ದಾಳಿ ನಡೆದಿರುವುದು ಮತ್ತಷ್ಟು ಚರ್ಚೆಗೀಡಾಗಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ 'ಇಸ್ಲಾಮಿಕ್ ಸೆಂಟ್'ನ ಅಧ್ಯಕ್ಷ ಶಾಹಿದ್ ಹಾಶ್ಮಿ 'ಇದು ಯಾವುದೇ ಅಪರಾಧ ಹಾಗೂ ದ್ವೇಷದಿಂದಾಗಿದ್ದಲ್ಲ' ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ
ಧಾರವಾಡ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿ ಮಾಡಿಸಲು ಹೈಕೋರ್ಟ್ ಸೂಚನೆ