ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡ ಹತ್ಯೆ ಹಿಂದೆ ಜೆಡಿಎಸ್ ಮುಖಂಡನ ಕೈವಾಡ?

Published : Nov 14, 2016, 08:12 AM ISTUpdated : Apr 11, 2018, 01:12 PM IST
ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡ ಹತ್ಯೆ ಹಿಂದೆ ಜೆಡಿಎಸ್ ಮುಖಂಡನ ಕೈವಾಡ?

ಸಾರಾಂಶ

2010ರಲ್ಲಿ ನಡೆದ ಚುನಾವಣೆಯಲ್ಲಿ ಗೋವಿಂದೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆ ಸಂದರ್ಭದಲ್ಲಿ ಅವರ ಗೆಲುವಿಗೆ ಚಿಕ್ಕತಿಮ್ಮೇಗೌಡರು ಸಹಕರಿಸಿದ್ದರು. ಆದರೆ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ  ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಗೋವಿಂದೇಗೌಡರನ್ನು ಪ್ರತಿಸ್ಪರ್ಧಿಯಾಗಿದ್ದ  ಬಿಜೆಪಿ ಅಭ್ಯರ್ಥಿ ಭಾಗ್ಯಮ್ಮ ಕೃಷ್ಣಪ್ಪ ಸೋಲಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಭಾಗ್ಯಮ್ಮರನ್ನು ಬೆಂಬಲಿಸಿದ್ದ ಚಿಕ್ಕತಿಮ್ಮೇಗೌಡ ತಮ್ಮ  ಪ್ರಭಾವ ಬಳಸಿಯೇ ಅವರನ್ನು ಗೆಲ್ಲುವಂತೆ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.  ಈ ಸೋಲಿನಿಂದ ಸಿಟ್ಟುಗೊಂಡಿದ್ದ ಮಾಜಿ ಕಾರ್ಫೋರೇಟರ್ ಪ್ರತೀಕಾರ ತೀರಿಸಲು ಸುಪಾರಿ ನೀಡಿ ಚಿಕ್ಕತಿಮ್ಮೇಗೌಡರನ್ನು ಕೊಲೆ  ಮಾಡಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು(ನ.14): ಬೆಂಗಳೂರಿನಲ್ಲಿ ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡ ಕೊಲೆ ಪ್ರಕರಣದಲ್ಲಿ JDS ಮುಖಂಡ ಮಾಜಿ ಕಾರ್ಪೋರೇಟರ್ ಕೈವಾಡ ಇರುವ ಆರೋಪ ಕೇಳಿ ಬಂದಿದೆ.

ನವೆಂಬರ್ 7 ರಂದು ಹೆಗ್ಗನಹಳ್ಳಿಯಲ್ಲಿ  ಮೂವರು ದುಷ್ಕರ್ಮಿಗಳು ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡನನ್ನು  ಚಾಕುವಿನಿಂದ ಿರಿದು ಕೊಲೆಗೈದಿದ್ದರು. ಆದರೀಗ ಈ ಕೊಲೆಯ ಹಿಂದೆ ಜೆಡಿಎಸ್ ಮುಖಂಡ, ಮಾಜಿ ಕಾರ್ಪೋರೇಟರ್ ಗೋವಿಂದೇಗೌಡ ಹಾಗೂ  ಪತ್ನಿ ವರಲಕ್ಷ್ಮಿ ಕೈವಾಡ ಇದೆ ಎಂದು  ಕುಟುಂಬಸ್ಥರು ದೂರು ನೀಡಿದ್ದಾರೆ.

2010ರಲ್ಲಿ ನಡೆದ ಚುನಾವಣೆಯಲ್ಲಿ ಗೋವಿಂದೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆ ಸಂದರ್ಭದಲ್ಲಿ ಅವರ ಗೆಲುವಿಗೆ ಚಿಕ್ಕತಿಮ್ಮೇಗೌಡರು ಸಹಕರಿಸಿದ್ದರು. ಆದರೆ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ  ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಗೋವಿಂದೇಗೌಡರನ್ನು ಪ್ರತಿಸ್ಪರ್ಧಿಯಾಗಿದ್ದ  ಬಿಜೆಪಿ ಅಭ್ಯರ್ಥಿ ಭಾಗ್ಯಮ್ಮ ಕೃಷ್ಣಪ್ಪ ಸೋಲಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಭಾಗ್ಯಮ್ಮರನ್ನು ಬೆಂಬಲಿಸಿದ್ದ ಚಿಕ್ಕತಿಮ್ಮೇಗೌಡ ತಮ್ಮ  ಪ್ರಭಾವ ಬಳಸಿಯೇ ಅವರನ್ನು ಗೆಲ್ಲುವಂತೆ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.  ಈ ಸೋಲಿನಿಂದ ಸಿಟ್ಟುಗೊಂಡಿದ್ದ ಮಾಜಿ ಕಾರ್ಫೋರೇಟರ್ ಪ್ರತೀಕಾರ ತೀರಿಸಲು ಸುಪಾರಿ ನೀಡಿ ಚಿಕ್ಕತಿಮ್ಮೇಗೌಡರನ್ನು ಕೊಲೆ  ಮಾಡಿರುವ ಆರೋಪ ಕೇಳಿ ಬಂದಿದೆ.

ಕೊಲೆಯಾದ ಬಳಿಕ  ಆರೋಪಿಗಳಿಬ್ಬರೂ ತಲೆ ಮರೆಸಿಕೊಂಡಿದ್ದು, ಕುಟುಂಬಸ್ಥರು ದೂರು ನೀಡಿದರೂ ಪೊಲೀಸರು ಮಾತ್ರ ಇನ್ನೂ ವಿಚಾರಣೆ ನಡೆಸಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ‘ಇಯರ್‌ರಿಂಗ್‌’ ಸೃಷ್ಟಿಸಿದ ಕುತೂಹಲ!
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ