ಅನಿತಾ ಕುಮಾರಸ್ವಾಮಿಗೆ ರಾಮನಗರ ಟಿಕೆಟ್ ಕಟ್? ಹಾಗಾದ್ರೆ ಮತ್ಯಾರಿಗೆ?

By Web DeskFirst Published Oct 8, 2018, 6:31 PM IST
Highlights

ರಾಮನಗರ ವಿಧಾನಸಭಾ ಉಪಚುನಾವಣೆಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಪಕ್ಕಾ ಎನ್ನಲಾಗಿತ್ತು. ಆದರೆ, ಇದೀಗ ಜೆಡಿಎಸ್ ತನ್ನ ವರಸೆ ಬದಲಿಸಿದಂತಿದೆ.

ಬೆಂಗಳೂರು, [ಅ.08]: ಕುಟುಂಬ ರಾಜಕಾರಣ ತಪ್ಪಿಸಲು ಜೆಡಿಎಸ್ ಉಪಚುನಾವಣೆಗೆ ಮಾಸ್ಟರ್ ಪ್ಲಾನ್ ಮಾಡಿದೆ. 

ರಾಮನಗರ ವಿಧಾನಸಭಾ ಉಪಚುನಾವಣೆಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಪಕ್ಕಾ ಎನ್ನಲಾಗಿತ್ತು. ಆದರೆ, ಇದೀಗ ಜೆಡಿಎಸ್ ತನ್ನ ವರಸೆ ಬದಲಿಸಿದೆ.

ಒಂದು ವೇಳೆ ರಾಮನಗರದಿಂದ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದ್ರೆ ಕುಟುಂಬ ರಾಜಕಾರಣ ಅಪಾದನೆಗೆ ಗುರಿಯಾಗುವುದು ಗ್ಯಾರಂಟಿ ಎನ್ನುವುದು ಜೆಡಿಎಸ್ ನಾಯಕರಿಗೆ ಮನವರಿಕೆಯಾಗಿದೆ.

ರಾಮನಗರ ಉಪಚುನಾವಣೆ ಮೈತ್ರಿಗೆ ಬಿಗ್ ಶಾಕ್: ಎಂಎಲ್ಸಿ ಪುತ್ರ ಬಿಜೆಪಿಯತ್ತ?

 ಇದ್ರಿಂದ ಕುಟುಂಬ ರಾಜಕಾರಣ ಅಪಾದನೆಯಿಂದ ಹೊರಬರಲು ಅನಿತಾ ಬದಲಿಗೆ ಪಿ. ಜಿಆರ್. ಸಿಂಧ್ಯಾ ಅಥವಾ ಸೊರಬ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ನಿಲ್ಲಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್ ಮಾಡಿದೆ.

ಅನಿತಾ ಕುಮಾರಸ್ವಾಮಿಗೆ ಟಿಕೆಟ್ ಕೊಟ್ರೆ, ಮುಂಬರುವ 2019ರ ಲೋಕಸಭಾ ಚುನಾವಣೆಗೆ ರೇವಣ್ಣ ಮಗ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಇದನ್ನು ಅರಿತಿರುವ ಜೆಡಿಎಸ್ ನಾಯಕರು ಅನಿತಾ ಅವರನ್ನು ಹೊರತುಪಡಿಸಿ ಬೇರೆ ಅಭ್ಯರ್ಥಿಗೆ ಮಣೆ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
 
ಸಿಂಧ್ಯಾ ಅಥವಾ ಮಧುಬಂಗಾರಪ್ಪ ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ರೆ ಕಾಂಗ್ರೆಸ್ ಪಕ್ಷದಿಂದಲೂ ಸಾಥ್ ಸಿಗಲಿದೆ ಎನ್ನುವುದು ಜೆಡಿಎಸ್ ಮುಖಂಡರ ಲೆಕ್ಕಚಾರ.
 

click me!