ಪಾಲ್ ರೋಮೆರ್, ವಿಲಿಯಂ ನೋರ್ದೆಸ್ ಗೆ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ!

By Web DeskFirst Published Oct 8, 2018, 6:03 PM IST
Highlights

2018 ರ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆ! ನೊಬೆಲ್ ಪ್ರಶಸ್ತಿಗೆ ಭಾಜನರಾದ ಪಾಲ್ ರೋಮೆರ್ ಹಾಗೂ ವಿಲಿಯಂ ನೋದೆರ್ಸ್! ಅಮೆರಿಕದ ಖ್ಯಾತ ಅರ್ಥಶಾಸ್ತ್ರ ದಿಗ್ಗಜರಿಗೆ ಒಲಿದ ನೊಬೆಲ್ ಪ್ರಶಸ್ತಿ! ಪ್ರಶಸ್ತಿ ಪ್ರಕಟಿಸಿದ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್

ವಾಷಿಂಗ್ಟನ್(ಅ.8): ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞರಾದ ಪಾಲ್ ರೋಮೆರ್ ಹಾಗೂ ವಿಲಿಯಂ ನೋದೆರ್ಸ್ ಅವರಿಗೆ 2018 ರ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆಯಾಗಿದೆ.

ನೋದರ್ಸ್ ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ. ಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಕಾರ್ಯನಿರ್ವಹಿಸಿದ್ದ ಮುಖ್ಯ ಅರ್ಥಶಾಸ್ತ್ರಜ್ಞ ರೋಮೆರ್, ದೀರ್ಘಾವಧಿಯ ನಿರಂತರ ಮತ್ತು ಸುಸ್ಥಿರ ಬೆಳವಣಿಗೆಯ ಕುರಿತು ಮಂಡಿಸಿದ್ದ ಸಿದ್ಧಾಂತಕ್ಕೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಅಧಿಕೃತ ಹೇಳಿಕೆ ನೀಡಿದೆ.

BREAKING NEWS: ⁰The Royal Swedish Academy of Sciences has decided to award the Sveriges Riksbank Prize in Economic Sciences in Memory of Alfred Nobel 2018 to William D. Nordhaus and Paul M. Romer. pic.twitter.com/xUs6iSyI7h

— The Nobel Prize (@NobelPrize)

ಇಬ್ಬರೂ ಅರ್ಥಶಾಸ್ತ್ರಜ್ಞರ ಸಂಶೋಧನೆಯು ಆರ್ಥಿಕತೆಯ ವಿಶ್ಲೇಷಣೆ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿದೆ.  ಮಾರುಕಟ್ಟೆಯ ಆರ್ಥಿಕತೆಯು ಹೇಗೆ ಪ್ರಕೃತಿ ಮತ್ತು ಹವಾಮಾನ ಬದಲಾವಣೆಗೆ ನಾಂದಿ ಹಾಡುತ್ತದೆ ಎಂಬ ಕುರಿತು ಇಬ್ಬರೂ ಅರ್ಥಶಾಸ್ತ್ರಜ್ಞರು ತಮ್ಮ ಸಿದ್ಧಾಂತ ಮಂಡಿಸಿದ್ದರು.
 

click me!