ಬಿಜೆಪಿ, ಜೆಡಿಎಸ್ ನಮ್ಮ ವಿರೋಧಿಗಳು

Published : Oct 02, 2016, 12:33 PM ISTUpdated : Apr 11, 2018, 01:00 PM IST
ಬಿಜೆಪಿ, ಜೆಡಿಎಸ್ ನಮ್ಮ ವಿರೋಧಿಗಳು

ಸಾರಾಂಶ

ಮನೆ ಮನೆಗೂ ತೆರಳಿ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಬೇಕು. ಕರ್ನಾಟಕದಲ್ಲಿ ಅಧಿಕಾರ ವಿಕೇಂದ್ರಿಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರ ದೊಡ್ಡದು. ಕಾಂಗ್ರೆಸ್ ಸರ್ಕಾರ ಮೂರೂವರೆ ವರ್ಷ ಯಾವುದೇ ಭ್ರಷ್ಟಾಚಾರವಿಲ್ಲದೆ ಕಾರ್ಯನಿರ್ವಹಿಸಿದೆ. ಕೊಟ್ಟ ಭರವಸೆಗಳನ್ನು ಈಡೇರಿಸಿದೆ

ಬೆಂಗಳೂರು(ಅ.2): ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಮ್ಮ ವಿರೋಧಿಗಳು. ಕಾಂಗ್ರೆಸ್ ನಡಿಗೆ ಸ್ವರಾಜ್ಯದ ಕಡೆಗೆ ಎಂಬ ಶೀರ್ಷಿಕೆಯಡಿ ಜನರ ಬಳಿ ಹೋಗಿ ಜನರಿಗೆ ನಮ್ಮ ಸಾಧನೆಗಳ ಬಗ್ಗೆ ಮನದಟ್ಟು ಮಾಡೋಣ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.

ಭಾರತ ಹಣಕಾಸಿನ ವ್ಯವಸ್ಥೆ ಹದಗೆಟ್ಟುವ ಸ್ಥಿತಿಗೆ ಬಂದಿದೆ. ದೇಶದ ಜನತೆ ಬಯಸುತ್ತಿರುವುದು ಅಭಿವೃದ್ಧಿಯನ್ನು. ಯಡಿಯೂರಪ್ಪ ಹಾಗೂ ಈಶ್ವರಪ್ಪ ರಾಜ್ಯ ಸುತ್ತುತ್ತಿದ್ದಾರೆ. ಅಲ್ಪಸಮುದಾಯವನ್ನು ಬಿಟ್ಟು ಸಮಾವೇಶ ಮಾಡುತ್ತಿದ್ದಾರೆ. ಜೆಡಿಎಸ್ ಬೆಳಿಗ್ಗೆ ಒಂದು ಸಂಜೆ ಒಂದು ಮಾತನಾಡುವ ಪಕ್ಷ. ಅವರಿಗೆ ನಮ್ಮ ಬೆಂಬಲ ಬೇಕು ಇಲ್ಲವೇ ಬಿಜೆಪಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಅವರಿಗೆ ಅಧಿಕಾರ ಸಿಗುತ್ತೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಾಗದು ಎಂದು ಸ್ಪಷ್ಟವಾಗಿ ಎರಡೂ ಪಕ್ಷಗಳು ನಮ್ಮ ವಿರೋಧಿಗಳು ಎಂದು ಹೇಳಿದರು.                       

ಮನೆ ಮನೆಗೂ ತೆರಳಿ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಬೇಕು. ಕರ್ನಾಟಕದಲ್ಲಿ ಅಧಿಕಾರ ವಿಕೇಂದ್ರಿಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರ ದೊಡ್ಡದು. ಕಾಂಗ್ರೆಸ್ ಸರ್ಕಾರ ಮೂರೂವರೆ ವರ್ಷ ಯಾವುದೇ ಭ್ರಷ್ಟಾಚಾರವಿಲ್ಲದೆ ಕಾರ್ಯನಿರ್ವಹಿಸಿದೆ. ಕೊಟ್ಟ ಭರವಸೆಗಳನ್ನು ಈಡೇರಿಸಿದೆ ಎಂದರು.

ನೀರಾವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ 40 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಮೀಸಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಬರಗಾಲ ತಾಂಡವವಾಡುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದೆ. ಮುಂದಿನ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದೆ. ಮುಂದೆಯು ನಮ್ಮ ಪಕ್ಷವೇ ಅಧಿಕಾರಕ್ಕೆ ಬರಬೇಕು. ಎಲ್ಲಾ ಕಾರ್ಯಕರ್ತರು ಶ್ರಮವಹಿಸಬೇಕು. ಮನೆ ಮನೆಗೂ ತೆರಳಿ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!