ಕಾಂಗ್ರೆಸ್ ನಾಯಕರ ಮೇಲಿನ ಆರೋಪವೇನು?

Published : Jul 08, 2019, 08:18 AM IST
ಕಾಂಗ್ರೆಸ್ ನಾಯಕರ ಮೇಲಿನ ಆರೋಪವೇನು?

ಸಾರಾಂಶ

ಸದ್ಯ ಮೈತ್ರಿ ಕೂಟ ಹಲವು ಶಾಸಕರು ರಾಜೀನಾಮೆ ನೀಡಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಇಂತಹ ಸ್ಥಿತಿಗೆ ಇದೀಗ ಕಾಂಗ್ರೆಸ್ ನಾಯಕರನ್ನು ಹೊಣೆ ಮಾಡಲಾಗುತ್ತಿದೆ. 

ಬೆಂಗಳೂರು [ಜು.08] :  ಮೈತ್ರಿ ಸರ್ಕಾರ ಪತನದ ಅಂಚು ತಲುಪಿರುವ ಹಿನ್ನೆಲೆ ಯಲ್ಲಿ ಹೊಣೆ ನುಣುಚಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ದೋಷಾರೋಪಣೆ ಮಾಡಿಕೊಳ್ಳಲು ಮುಂದಾಗಿವೆ. ತನ್ಮೂಲಕ ಸರ್ಕಾರ ಪತನದ ಹೊಣೆಯನ್ನು ಮೈತ್ರಿಯ ಅಂಗ ಪಕ್ಷದ ಮೇಲೆ ಹಾಕುವ ಪ್ರಯತ್ನವನ್ನು ಉಭಯ ಪಕ್ಷಗಳ ನಾಯಕತ್ವ ನಡೆಸುತ್ತಿದೆ. ಈ ಪೈಕಿ ಕಾಂಗ್ರೆಸ್ ಮೇಲೆ ಮುಖ್ಯ ಆರೋಪವೆಂದರೆ ಕುಮಾರಸ್ವಾಮಿ ಅವರಿಗೆ ಸಮರ್ಪಕವಾಗಿ ಕೆಲಸ ಮಾಡ ಲು ಕಾಂಗ್ರೆಸ್ ನಾಯಕರು ವಿಶೇಷವಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವಕಾಶ ನೀಡಿಲ್ಲ. 

1 ನಮ್ಮ ಯೋಜನೆ ನಿಲ್ಲಿಸಬಾರದೆಂದು ಸತತ ಒತ್ತಡ ಹೇರಿ ಎಚ್‌ಡಿಕೆಗೆ ಸಿದ್ದು ಅಡ್ಡಿ

2 ಎಚ್‌ಡಿಕೆ ಧೃತಿಗೆಡಿಸಿದ ‘ಸಿದ್ದು ಸರ್ಕಾರ ಉತ್ತಮವಿತ್ತೆಂಬ’ ಬೆಂಬಲಿಗರ ಹೇಳಿಕೆ 

3 ಕಾಂಗ್ರೆಸ್ ಶಾಸಕರನ್ನು ಒಟ್ಟಿಗೆ ಇರಿಸಿಕೊಳ್ಳುವಲ್ಲಿ ಪಕ್ಷ ನಾಯಕರು ತೀವ್ರ ವಿಫಲ

4 ಬೆಂಗಳೂರಿನ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪರಮೇಶ್ವರ್

5 ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯಗೆ ಕಡಿವಾಣ ಹಾಕಲಿಲ್ಲ

ಜನಪರ ಕೆಲಸ ಮಾಡಲು ಸಿದ್ದರಾಮಯ್ಯ ಅವಕಾಶ ನೀಡಲಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಯಾಗಿದ್ದ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಸತತ ಒತ್ತಡ ತಂದ ಕಾರಣ ಸಮರ್ಪಕವಾಗಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ತನ್ಮೂಲಕ ಸರ್ಕಾರದ ಮೇಲೆ ಉತ್ತಮ ಜನಾಭಿಪ್ರಾಯ ರೂಪುಗೊಳ್ಳದಂತೆ ತಡೆದರು. 

2 ರೈತರ ಸಾಲ ಮನ್ನಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಿದ್ದರೆ ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೊಂಡಿದ್ದ ಹಲವು ಯೋಜನೆಗಳಿಗೆ ಕತ್ತರಿ ಹಾಕುವುದು ಅನಿವಾರ್ಯವಾಗಿತ್ತು. ಆದರೆ, ಇದಕ್ಕೆ ಆಸ್ಪದ ನೀಡಲಿಲ್ಲ. ಸಮನ್ವಯ ಸಮಿತಿ ಸಭೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮೂಲಕ ಒತ್ತಡ ಹಾಕಿಸಿ ಯೋಜನೆ ಮುಂದುವರೆಯುವಂತೆ ಮಾಡುವ ಮೂಲಕ ಕುಮಾರಸ್ವಾಮಿ ಅವರ ಯೋಜನೆಗಳು 
ಯಶಸ್ವಿಯಾಗದಂತೆ ನೋಡಿಕೊಂಡರು. 

3 ಕುಮಾರಸ್ವಾಮಿ ಹಾಗೂ ಸರ್ಕಾರದ ವಿರುದ್ಧ ಸತತವಾಗಿ ಕಾಂಗ್ರೆಸ್ ಶಾಸಕರು ಹೇಳಿಕೆ ನೀಡುವಂತೆ ಸಿದ್ದರಾಮಯ್ಯ ಪ್ರೇರೇಪಿಸಿದರು. ಇದರಿಂದ ಸರ್ಕಾರ ಗೊಂದಲದಲ್ಲಿ ಮುಳುಗಿದೆ ಎಂದು ಬಿಂಬಿತಗೊಂಡು ಸರ್ಕಾರ ಯಾವಾಗಬೇಕಾದರೂ ಬೀಳಬಹುದು ಎಂಬ ಅಭಿಪ್ರಾಯ ನಿರ್ಮಾಣವಾಯಿತು. ಇದರಿಂದ ಆಡಳಿತ ವರ್ಗ ಮುಖ್ಯಮಂತ್ರಿಯವರಿಗೆ ಪರಿಪೂರ್ಣ ಸಹಕಾರ ನೀಡಲಿಲ್ಲ. ತನ್ಮೂಲಕ ಸುಗಮವಾಗಿ ಆಡಳಿತ ನಡೆಸಲು ಅಡ್ಡಿ ಉಂಟಾಯಿತು.

4 ತಮ್ಮ ಬೆಂಬಲಿಗ ಕಾಂಗ್ರೆಸ್ ಶಾಸಕರ ಮೂಲಕ ಸಿದ್ದರಾಮಯ್ಯ ಸರ್ಕಾರವೇ ಉತ್ತಮವಾಗಿತ್ತು, ಅವರೇ ನಮಗೆ ಮುಖ್ಯಮಂತ್ರಿ ಎಂದು ಸತತವಾಗಿ ಹೇಳಿಸುವ ಮೂಲಕ ಕುಮಾರಸ್ವಾಮಿ ಅವರ ಧೃತಿಗೆಡಿಸುವ ಕೆಲಸ ಮಾಡಿದರು.

5 ಕಾಂಗ್ರೆಸ್ ಶಾಸಕರನ್ನು ಎತ್ತಿಕಟ್ಟಿ ಕುಮಾರಸ್ವಾಮಿ ಹಾಗೂ ಸರ್ಕಾರದ ವಿರುದ್ಧ ಸತತ ಆರೋಪಗಳನ್ನು ಮಾಡಿಸಲಾಯಿತು. ಅಲ್ಲದೆ, ಮಿತಿ ಮೀರಿದ ಅನುದಾನ ಕೇಳುವಂತೆ ಪ್ರೇರೇಪಿಸಿದರು. ಅದನ್ನು ನಿರಾಕರಿಸಿದಾಗ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂಬ ಆರೋಪಗಳನ್ನು ಶಾಸಕರಿಂದ ಮಾಡಿಸಿದರು. 

6 ಇನ್ನು ಕಾಂಗ್ರೆಸ್ ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳುವಲ್ಲಿ ಕಾಂಗ್ರೆಸ್‌ನ ಇತರ ನಾಯಕರು ವಿಫಲರಾದರು. ಅದರಲ್ಲೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಬೆಂಗಳೂರಿನತಮ್ಮ ಪಕ್ಷದ ಶಾಸಕರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದರಿಂದ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಪರಮೇಶ್ವರ್ ವಿರುದ್ಧವೇ ಸಿಟ್ಟಾದರು. ಇದು ಸರ್ಕಾರದ ಪತನದ ಅಂಚು ಮುಟ್ಟುವ ಕಾರಣಗಳ ಪೈಕಿ ಒಂದಾಯಿತು. 

7 ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರನ್ನು ನಿಯಂತ್ರಣದಲ್ಲಿ ಇಡಲಿಲ್ಲ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದರೂ ಕೂಡ ಹೈಕಮಾಂಡ್ ಅಸಹಾಯಕತೆ ತೋರಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬನ್ನೇರುಘಟ್ಟದಲ್ಲಿ ಅಪರೂಪದ ಅತಿಥಿ, ಆಫ್ರಿಕಾದಿಂದ ಆಗಮಿಸಿದ ಕ್ಯಾಪುಚಿನ್ ಕೋತಿಗಳು!
ದೇಶದಲ್ಲಿ ದಯನೀಯ ಸ್ಥಿತಿಗಿಳಿದ ಅನ್ನದಾತ, ಸಾಲ ಮರುಪಾವತಿಸಲು ಕಿಡ್ನಿ ಮಾರಿದ ರೈತ!