ಹುಶಾರ್, ನೆಲಮಂಗಲದಲ್ಲಿದ್ದಾನೆ ಖತರ್ನಾಕ್ ವಿಕೃತಕಾಮಿ: ಒಂಟಿ ಮನೆಯ ಮಹಿಳೆಯರೆ ಈತನ ಟಾರ್ಗೆಟ್

Published : Jan 09, 2018, 08:56 PM ISTUpdated : Apr 11, 2018, 12:42 PM IST
ಹುಶಾರ್, ನೆಲಮಂಗಲದಲ್ಲಿದ್ದಾನೆ ಖತರ್ನಾಕ್ ವಿಕೃತಕಾಮಿ: ಒಂಟಿ ಮನೆಯ ಮಹಿಳೆಯರೆ ಈತನ ಟಾರ್ಗೆಟ್

ಸಾರಾಂಶ

ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಹಿಳೆ, ಯಶವಂತಪುರದ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ನೆಲಮಂಗಲ(ಜ.09): ಮತ್ತೊಬ್ಬ ವಿಕೃತ ಕಾಮಿಯ ಹೀನಾಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು ನಗರ ಹಾಗೂ ಹೊರವಲಯದ ಜನರಲ್ಲಿ ಈ ಕಾಮಿಯ ಕೃತ್ಯ ಆತಂಕ ಹುಟ್ಟಿಸಿದೆ. ಒಂಟಿ ಮನೆಯ ಮಹಿಳೆಯರೆ ಈ ವಿಕೃತ ಕಾಮಿಯ ಟಾರ್ಗೆಟ್  ಆಗಿದ್ದಾರೆ.ನಿನ್ನೆ ನೆಲಮಂಗಲ ಪಟ್ಟಣದ ನಿರ್ಮಾಣ ಹಂತದ ಮನೆಯಲ್ಲಿ ಒಂಟಿ ಮಹಿಳೆಯ ಮೇಲೆ ಮಹಿಳೆಯೊಬ್ಬರ ಮೇಲೆ ಈ ವಿಕೃತಕಾಮಿ ಮೃಗೀಯ ರೀತಿಯಲ್ಲಿ ವಿಕೃತ ಕಾಮವನ್ನು ತೋರಿಸಿದ್ದಾನೆ.

ಹೊಸ ಮನೆಯಲ್ಲಿ ಟೈಲ್ಸ್ ಅಳವಡಿಸಲು ಬಂದಿದ್ದ ವಿಕೃತ ಕಾಮಿ ಮಹಿಳೆಯ ಕಣ್ಣು, ಕುತ್ತಿಗೆ ಕೊಯ್ದು ಮನಸೋ ಇಚ್ಛೆ ಹಲ್ಲೆ ನಡೆಸಿ ಗುಪ್ತಾಂಗಗಳನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಹಿಳೆ, ಯಶವಂತಪುರದ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರ ರಾಜ್ಯಗಳಿಂದ ಕೆಲಸಕ್ಕೆ ಬಂದಿರುವವರಿಂದ  ಕೃತ್ಯ ಎನ್ನಲಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಕೃತ ಕಾಮಿಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?