
Click Here: ಅಮ್ಮನ ನಂತರ ಶುರುವಾಗಿದೆ ತಮಿಳುನಾಡಿನಲ್ಲಿ ರಜಿನಿಯ ಹವಾ: ಬೆಚ್ಚಿರುವ ಶಶಿಕಲಾ, ಕಂಗಾಲಾದ ಡಿಎಂಕೆ ನಾಯಕರು
ಚೆನ್ನೈ(ಡಿ.11): ಜಯಲಲಿತಾ ಹಾಗೂ ಆಕೆಯ ಪಕ್ಷ ಸೋತಿದ್ದೇ ನನ್ನಿಂದ ಎಂದು ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ಸತ್ಯ ಹೊರಬಿಚ್ಚಿಟ್ಟಿದ್ದಾರೆ.
ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ದಕ್ಷಿಣ ಭಾರತೀಯ ಕಲಾವಿದರ ಸಂಘ ಹಮ್ಮಿಕೊಂಡಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ರಜಿನಿ, ಆಗ 1996ರ ಚುನಾವಣಾ ಸಮಯ, ಜಯಲಲಿತಾ ಸರ್ಕಾರ ಹೆಚ್ಚು ಭ್ರಷ್ಟಾಚಾರವೆಸಗಿತ್ತು. ನನಗೂ ಜಯಾ ಸರ್ಕಾರದ ಬಗ್ಗೆ ಆಕ್ರೋಶವಿತ್ತು.
ಆ ಸಂದರ್ಭದಲ್ಲಿ 'ಮುಂದಿನ ಚುನಾವಣೆಯಲ್ಲಿ ಜಯಾಲಲಿತಾ ಪಕ್ಷ ಎಐಡಿಎಂಕೆ ಅಧಿಕಾರಕ್ಕೆ ಬಂದರೆ ತಮುಳುನಾಡನ್ನು ದೇವರೂ ಕೂಡ ಕ್ಷಮಿಸಲಾರ' ಎಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದೆ. ಈ 'ನನ್ನ ಒಂದು ಮಾತಿನಿಂದ ಜಯಲಲಿತಾ ಹಾಗೂ ಅವರ ಪಕ್ಷ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತ್ತು' ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಯಾ ಅವರು ತಮ್ಮ ಮಗಳ ಮದುವೆಗೆ ಆಗಮಿಸಿದ ಸಂದರ್ಭವನ್ನು ನನೆಸಿಕೊಂಡ ಅವರು' ನನ್ನ ಮಗಳ ಮದುವೆಗೆ ಆಹ್ವಾನಿಸಲು ಜಯಲಲಿತಾ ಅವರ ಮನೆಗೆ ಹೋಗಲು ಮುಂಚಿತ ಅನುಮತಿಯನ್ನು ಪಡೆದು ಪಡೆದುಕೊಂಡಿದ್ದೆ. ಅಲ್ಲದೆ ನನ್ನನ್ನು ಭೇಟಿ ಮಾಡುವುದಿಲ್ಲ ಎಂದು ಅಂದುಕೊಂಡಿದೆ. ಆದರೆ ನನ್ನ ಯೋಚನೆ ಸುಳ್ಳಾಗಿತ್ತು. ಅವರು ಆಗಮಿಸಿ ಖಂಡಿತಾ ಮದುವೆಗೆ ಬರುವುದಾಗಿ ತಿಳಿಸಿದ್ದರು.
ಪಿತೃಪ್ರಧಾನ ವ್ಯವಸ್ಥೆಯಲ್ಲಿ ಅವರೊಬ್ಬರು ಹೊಳೆಯುವ ಕೊಹಿನೂರು ವಜ್ರ' ಎಂದು ಬಣ್ಣಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.