
ಒಡಿಶಾ(ಡಿ.11): 500 ಹಾಗೂ 1000 ರೂ. ನೋಟು ಬ್ಯಾನ್ ವಿಚಾರ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಈ ಬಾರಿಯ ಅಧಿವೇಶನವೂ ನೋಟ್ ಬ್ಯಾನ್ ಬಿಸಿಗೆ ಬಲಿಯಾಗುತ್ತಿದೆ. ಆದರೆ ಇವೆಲ್ಲದರ ನಡುವೆ ಯುವಕನೊಬ್ಬ 500 ರೂ. ಹಳೆ ನೋಟಿನಿಂದ ವಿದ್ಯುತ್ ಉತ್ಪಾದಿಸಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾನೆ,
ಈ ಕುರಿತಾಗಿ ಮಾತನಾಡಿರುವ ಯುವಕ 'ಬಿಸಿಲು ಇಲ್ಲವೇ ಬೆಳಕಿನ ಸಂಪರ್ಕಕ್ಕೆ ಬರುತ್ತಿದ್ದಂತೆ, ಇದರಿಇಂದ ಸಿಲಿಕಾನ್ ವಿದ್ಯುತ್ ಉತ್ಪಾದಿಸಬಹುದು. ಕೇವಲ ಸಿಲಿಕಾನ್ ಪ್ಲೇಟ್'ನ್ನು ನೋಟ್'ನ ಒಂದು ಬದಿಗೆ ಅಳವಡಿಸಬೇಕಾಗುತ್ತದೆ.' ಎಂದಿದ್ದಾನೆ.
'ಸಿಲಿಕಾನ್ ಪ್ಲೇಟ್ ಅಳವಡಿಸಿದ ನೋಟನ್ನು ಬಿಸಿಲಿನ ಸಂಪರ್ಕಕ್ಕೆ ತರುತ್ತಿದ್ದಂತೆಯೇ ಇದರಿಂದ ಸುಮಾರು 5 ವೋಲ್ಟ್'ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಒಂದು ವೇಳೆ ಇದನ್ನು ವಿದ್ಯುತ್ ತಂತಿಯೊಂದಿಗೆ ಟ್ರಾನ್ಸ್'ಫರ್ಮರ್'ಗೆ ಜೋಡಿಸಿದರೆ 220 ವೋಲ್ಟ್'ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ ಒಂದು ಬಲ್ಬ್ ಇಲ್ಲವೇ ಫ್ಯಾನ್'ನ್ನು ತಿರುಗುತ್ತದೆ. ಈ ವಿದ್ಯುತ್'ನ್ನು ಬ್ಯಾಟರಿ ರೂಪದಲ್ಲಿ ಸ್ಟೋರ್ ಮಾಡಿದರೆ ದಿನದ 24 ಗಂಟೆಯೂ ಬಳಸಬಹುದು' ಎನ್ನುವುದು ಯುವಕನ ಮಾತಾಗಿದೆ.
500 ರೂಪಾಯಿ ನೋಡಿನಲ್ಲಿರುವ ಸಿಲಿಕಾನ್ ಉಪಯೋಗಿಸಿ ವಿದ್ಯುತ್ ತಯಾರಿಸಿದ ಆ ಲಕ್ಷ್ಮಣ್ ದುಂಡಿ, ಸದ್ಯ ಒಡಿಶಾದ ನುವಾಪಾಡಾ ಖಾರಿಯರ್ ಕಾಲೇಜ್'ನಲ್ಲಿ ಇಂಟರ್'ಮೀಡಿಯೆಟ್ ಸೈನ್ಸ್'ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ತನ್ನ ಈ ವಿನೂತನ ಅನ್ವೇಷಣೆಯನ್ನು ಯಶಸ್ವಿಗೊಳಿಸಲು ಈತ ಸರ್ಕಾರದ ಪ್ರೋತ್ಸಾಹ ಬಯಸುತ್ತಿದ್ದಾನೆ. ಕೂಲಿ ಕಾರ್ಮಿಕರ ಮಗನಾಗಿರುವ ಈತನೂ ಕಾಲೇಜು ಮುಗಿಸಿ ಕೆಲಸ ಮಾಡುತ್ತಾನೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ವಿಜ್ಞಾನ ಉಪನ್ಯಾಸಕರೊಬ್ಬರು 'ಒಂದು ವೇಳೆ 500 ರೂ ನೋಟಿನಲ್ಲಿ ನಿಜಕ್ಕೂ ಸಿಲಿಕಾನ್ ಇದ್ದರೆ ಇದನ್ನು ಸೋಲಾರ್ ಬ್ಯಾಟರಿಯಾಗಿ ಬಳಸಬಹುದು ಹಾಗೂ ವುದ್ಯುತ್ ಉತ್ಪಾದಿಸಬಹುದು' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.