
ಚೆನ್ನೈ(ಅ.8): ತಮಿಳುನಾಡಿನ ಸಿಎಂ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರ ಆನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಸಿಂಗಾಪುರಕ್ಕೆ ಶಿಫ್ಟ್ ಮಾಡಿ ಎಂದು ದೆಹಲಿಯಿಂದ ಬಂದಿರುವ ಏಮ್ಸ್ ವೈದ್ಯರ ತಂಡ ಅಪೋಲೋ ಆಸ್ಪತ್ರೆಯ ವೈದ್ಯರಿಗೆ ಸಲಹೆ ನೀಡಿದ್ದಾರೆ. ಕಳೆದ 5 ದಿನಗಳ ಹಿಂದೆ ಅಪೋಲೋ ಆಸಅ್ಪತ್ರೆಗೆ ಆಗಮಿಸಿರುವ ದೆಹಲಿ ಏಮ್ಸ್ನ ಡಾ.ಕಿಲ್ನಾನಿ, ಡಾ.ನಿತೀಶ್ ನಾಯಕ್ಮತ್ತು ಡಾ.ಅಂಜನ್ ತ್ರಿಖಾ ಈ ಸಲಹೆಯನ್ನು ನೀಡಿದ್ದಾರೆ.
ತೀವ್ರ ಮಧುಮೇಹದಿಂದ ಬಳಲುತ್ತಿರುವ ಜಯಲಲಿತಾ ವರನ್ನು ಈ ಸಂದರ್ಭದಲ್ಲಿ ಶಿಫ್ಟ್ ಮಾಡುವುದು ಸ್ವಲ್ಪ ಕಷ್ಟ ಎನಿಸಿದರೂ, ಅವರನ್ನು ಸಿಂಗಾಪುರದ ಮೌಂಟ್ ಎಲಿಜಬತ್ ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಸಂಪೂರ್ಣವಾಗಿ ಗುಣಮುಖರಾಗ್ತಾರೆ ಎಂಬುದನ್ನು ದೆಹಲಿಯ ವೈದ್ಯರ ತಂಡ ತಿಳಿಸಿದ್ದಾರೆ. ಹೀಗಾಗಿ ಇಂದಿನಿಂದ ಮೂರು ದಿನಗಳ ಕಾಲ ಜಯಲಲಿತಾ ಅವರಿಗೆ ವೆಂಟಿಲೇಟರ್ನಲ್ಲಿ ಕೊಂಚ ಉಸಿರಾಟವನ್ನು ಕಡಿಮೆ ಮಾಡಿ ನಿಗಾವಹಿಸಿ ಅವರು ಸ್ಪಂದಿಸಿದ್ದೇ ಆದ್ರೆ, ಮುಂದಿನ ಬುಧುವಾರದ ನಂತರ ಜಯಾರನ್ನು ಸಿಂಗಾಪುರದ ಮೌಂಟ್ ಎಲಿಜಬತ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು ಎಂಬ ವಿಚಾರ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.