ತಮಿಳುನಾಡು ಸಿಎಂಗೆ ಸೆಪ್ಸೀಸ್ ಸಮಸ್ಯೆ: ಅತೀವ ಜ್ವರ, ನಿಶಕ್ತಿ, ಬಹು ಅಂಗಾಂಗ ವೈಫಲ್ಯ

By Internet DeskFirst Published Oct 2, 2016, 8:58 PM IST
Highlights

ಚೆನ್ನೈ(ಅ.03): ತಮಿಳುನಾಡು ಸಿಎಂ ಜಯಲಲಿತಾ ಅಪೋಲೋ ಆಸ್ಪತ್ರೇಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಂತೂ ಅಮ್ಮಾಗೆ ಬಾಧಿಸುತ್ತಿರುವ ರೋಗದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿದ್ದು ಸೆಪ್ಸೀಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ನೀಡುತ್ತಿರುವ ಲಂಡನ್ ಮೂಲದ ವೈದ್ಯರು ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಜಯಲಲಿತಾ ಆರೋಗ್ಯ ವಿಚಾರಿಸಲಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಸೆಪ್ಸೀಸ್ ಸಮಸ್ಯೆಯಿಂದ ಬಳಲುತ್ತಿರುವುದು ಇದೀಗ ಧೃಡಪಟ್ಟಿದೆ. ಕಳೆದ ಹನ್ನೊಂದು ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೇಲಿರೋ ಜಯಾಗೆ ಮೊದಲು ಕಾಣುಸಿಕೊಂಡಿದ್ದು ಅತೀವ ಜ್ವರ ಮತ್ತು ನಿಶಕ್ತಿ. ದಿನ ಕಳೆದಂತೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಿಸಲಿಲ್ಲ. ಇದೀಗ ಆಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿರುವ  ಡಾ.ರಿಚರ್ಡ್, ಅಮ್ಮಾಗೆ ಸೆಪ್ಸೀಸ್ ತಗುಲಿರುವುದು ಧೃಡಪಡಿಸಿದ್ದಾರೆ.

Latest Videos

ಸೆಪ್ಸೀಸ್​ ಗುಣಲಕ್ಷಣಗಳು 

- ಅತೀವ ಜ್ವರ, ನಿಶಕ್ತಿಯಿಂದ ಬಳಲುವುದು

- ದೇಹದ ಅಂಗಾಗಳು ಕಾರ್ಯ ಸ್ಥಗಿತ

- ರಕ್ತದೊತ್ತಡ, ಮಧುಮೇಹ ಉಲ್ಬಣ

- ಹೃದಯ ಬಡಿತದಲ್ಲೂ ಏರುಪೇರು

ಈ ಸಮಸ್ಯೆಗೆ ತುತ್ತಾದವರು, ಅತೀವ ಜ್ವರ, ನಿಶಕ್ತಿಯಿಂದ ಬಳಲುತ್ತಿರುತ್ತಾರೆ. ಈಗ ಜಯಾ ಆಸ್ಪತ್ರೆಗೆ ದಾಖಲಾಗಿರುವುದೇ ಅತೀವ ಜ್ವರ ಮತ್ತು ನಿಶಕ್ತಿಯ ಕಾರಣಕ್ಕೆ. ಈ ಸಮಸ್ಯೆ ಎದುರಾದ ತಕ್ಷಣವೇ ದೇಹದ ಬೇರೆ ಭಾಗಗಳು ತನ್ನ ಕಾರ್ಯ ಸ್ಥಗಿತದ ಸಾಧ್ಯತೆಯಿದ್ದು, ಅಮ್ಮಾ ದೇಹದಲ್ಲೂ ರಕ್ತದೊತ್ತಡ ಮತ್ತು ಮಧುಮೇಹ ಹೆಚ್ಚಾಗಿದೆ. ಇನ್ನೂ ಹೃದಯ ಬಡಿತದಲ್ಲೂ ಏರುಪೇರಾಗಲಿದ್ದು ಮೆದುಳಿಗೆ ಸೆಪ್ಸೀಸ್ ತಡೆಯುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ.

ಆಸ್ಪತ್ರೆಯಲ್ಲೇ ಸಚಿವರು, ಅಧಿಕಾರಿಗಳು ಮೊಕ್ಕಾಂ

ಇನ್ನು ಸರ್ಕಾರದ ಹಿರಿಯ ಸಚಿವರು, ಶಾಸಕರು ಸೇರಿದಂತೆ 19ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿ ಜಯಲಲಿತಾ ಆರೋಗ್ಯ ವಿಚಾರಿಸಿದ್ರು. ಆದರೆ ಮಾಧ್ಯಮಗಳಿಗೆ ಮಾತ್ರ ಯಾವೊಬ್ಬ ಶಾಸಕರಾಗಲೀ, ಸಚಿವರಾಗಲೀ, ಅಮ್ಮನ ಆರೋಗ್ಯದ ಬಗ್ಗೆ ತುಟಿಬಿಚ್ಚಿಲ್ಲ. 

ಆಸ್ಪತ್ರೆಯಲ್ಲೇ ಲೋಕಲ್ ಎಲೆಕ್ಷನ್ ಮೀಟಿಂಗ್

ಅಂದ್ ಹಾಗೆ ಇದೇ ತಿಂಗಳು ನಡೆಯಲಿರೋ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆ ಕೂಡ ಆಸ್ಪತ್ರೆಯಲ್ಲೇ ಮೀಟಿಂಗ್​ ನಡೆದಿದೆ. ಹೊರಭಾಗದಲ್ಲಿ ಪೊಲೀಸ್​ ಸರ್ಪಗಾವಲು. ಹೀಗಾಗಿ ಅಭಿಮಾನಿಗಳಿಂದ ಅಸ್ಪತ್ರೆ ಹೊರಭಾಗಲ್ಲೇ ಪೂಜೆ ಪುನಸ್ಕಾರಗಳು ನಡೆದವು. ಒಟ್ಟಿನಲ್ಲಿ ತಮಿಳುನಾಡಿನ ಸಿಎಂ ಜಯಲಲಿತಾ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ರೋಗವನ್ನೂ ಪತ್ತೆ ಹಚ್ಚಲಾಗಿದೆ. ಅವರೀಗ ಚಿಕಿತ್ಸೆಗೆ ಸ್ಪಂದಿಸಿತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ, ಅಮ್ಮನ ಫೋಟೋ ಆಗಲಿ, ವಿಡಿಯೋ ತುಣುಕಾಗಲೀ ಬಿಡುಗಡೆಗೊಳಿಸದಿರೋದು ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ.

 

click me!