ತಮಿಳುನಾಡು ಸಿಎಂ ಜಯಲಲಿತಾ(68) ವಿಧಿವಶ..?

Published : Dec 03, 2016, 09:33 PM ISTUpdated : Apr 11, 2018, 01:12 PM IST
ತಮಿಳುನಾಡು ಸಿಎಂ ಜಯಲಲಿತಾ(68) ವಿಧಿವಶ..?

ಸಾರಾಂಶ

ಚೆನ್ನೈ(ಡಿ.05): ತಮಿಳುನಾಡು ಸಿಎಂ ಜಯಲಲಿತಾ ಇನ್ನಿಲ್ಲ. 73 ದಿನಗಳಿಂದ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಇಂದು ಸಂಜೆ ನಿಧನರಾಗಿದ್ದಾರೆ ಎಂದು ತಮಿಳುನಾಡಿನ 2 ಸುದ್ಧಿವಾಹಿನಿಗಳು ವರದಿ ಮಾಡಿವೆ. ಈ ಕುರಿತಂತೆ ಅಧಿಕೃತ ಘೋಷಣೆ ಬಾಕಿ

ಚೆನ್ನೈ(ಡಿ.05): ತಮಿಳುನಾಡು ಸಿಎಂ ಜಯಲಲಿತಾ ಇನ್ನಿಲ್ಲ. 73 ದಿನಗಳಿಂದ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಇಂದು ಸಂಜೆ ನಿಧನರಾಗಿದ್ದಾರೆ ಎಂದು ತಮಿಳುನಾಡಿನ 2 ಸುದ್ಧಿವಾಹಿನಿಗಳು ವರದಿ ಮಾಡಿವೆ. ಈ ಬಗ್ಗೇ ಇನ್ನೂ ಅಧಿಕೃತ ಘೋಷಣೆ ಬಾಕಿ ಇದೆ. ನಿನ್ನೆ ಹೃದಯಾಘಾತಕ್ಕೆ ಒಳಗಾಗಿದ್ದ ಜಯಲಲಿತಾ ಅವರನ್ನ ಬದುಕಿಸಲು ನಿನ್ನೆಯಿಂದ ವೈದ್ಯರು ನಡೆಸಿ ಅವಿರತ ಪ್ರಯತ್ನ ಫಲ ನೀಡಲಿಲ್ಲ.

73 ದಿನಗಳ ಹಿಂದೆ ಸೆಪ್ಸಿಸ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಸತತ ಚಿಕಿತ್ಸೆ ಬಳಿಕ ಚೇತರಿಸಿಕೊಂಡರೂ ಎನ್ನುವಷ್ಟರಲ್ಲಿ ನಿನ್ನೆ ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದರು. ಹೈಪ್ರೋಟೀನ್ ಡಯಟ್`ನಿಂದ ಪೊಟಾಶಿಯಂ ಹೆಚ್ಚಾಗಿ ಜಯಲಲಿತಾಗೆ ಹೃದಯಾಘಾತ ಸಂಭವಿಸಿತ್ತು. ನಿನ್ನೆ ಸಂಜೆಯಿಂದ ಜಯಲಲಿತಾಗೆ ಎಕ್ಮೋ ಚಿಕಿತ್ಸೆ ನೀಡಲಾಗುತ್ತಿತ್ತು.

ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ತೀವ್ರ ಪೊಲೀಸ್ ಕಟ್ಟೆಚ್ಚರವಹಿಸಲಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ