
ಬೆಂಗಳೂರು(ಸೆ.04): 2018ಕ್ಕೆ ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಹೈಕಮಾಂಡ್ ಹೊರಿಸಿರುವ ಜವಾಬ್ದಾರಿ ಹೊತ್ತು ಬೆಂಗಳೂರಿಗೆ ಬಂದಿಳಿದಿರುವ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಇಂದಿನಿಂದ ತಮ್ಮ ಚಟುವಟಿಕೆ ಆರಂಭಿಸಲಿದ್ದಾರೆ. ಸಹ ಚುನಾವಣಾ ಉಸ್ತುವಾರಿಯಾಗಿರುವ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಕೂಡಾ ಜಾವಡೇಕರ್ಗೆ ಜೊತೆ ನಿಲ್ಲಲಿದ್ದಾರೆ.
ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿರುವ ಜಾವಡೇಕರ್ ಉಪಸ್ಥಿತಿಯಲ್ಲಿ ಬೆಳಗ್ಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಮಧ್ಯಾಹ್ನದ ಬಳಿಕ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯೂ ನಿಗದಿಯಾಗಿದೆ. ಈ ಮಧ್ಯೆ ಪ್ರಕಾಶ್ ಜಾವಡೇಕರ್ ಉಪಸ್ಥಿತಿಯಲ್ಲೇ ರಾಜ್ಯ ಸರ್ಕಾರದ ಸಚಿವರೊಬ್ಬರ ವಿರುದ್ದದ 600 ಎಕರೆ ಭೂ ಹಗರಣದ ಆರೋಪದ ದಾಖಲಾತಿಗಳನ್ನು ಯಡಿಯೂರಪ್ಪ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಒಟ್ಟಾರೆ, ಮಿಷನ್ 150ಕ್ಕೆ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಇಂದಿನಿಂದ ಕಮಲ ಪಕ್ಷದ ಗಂಭೀರ ತಯಾರಿ ಆರಂಭವಾಗಲಿದೆ. ಅಮಿತ್ ಷಾ ನಿರ್ದೇಶನಗಳು ಇಂದಿನಿಂದ ಜಾವಡೇಕರ್ ಮೂಲಕ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿವೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.