ವಿಸರ್ಜನೆ ಮಾಡಲು ಗಣೇಶನ ಮೂರ್ತಿ ಮೇಲೆ ಬರ್ತಿಲ್ಲ!: ಪವಾಡ ನೋಡಲು ಹರಿದು ಬರುತ್ತಿದೆ ಜನಸಾಗರ

By Precilla DiasFirst Published Sep 4, 2017, 8:25 AM IST
Highlights

ಆ ಗ್ರಾಮದ ಜನರು ಪ್ರತಿವರ್ಷದಂತೆ ಈ ವರ್ಷವೂ ಗಣೇಶನನ್ನು ಪ್ರತಿಷ್ಠಾಪಿಸಿದ್ದರು. 5 ದಿನಗಳ ಕಾಲ ಪೂಜೆ ಪುನಸ್ಕರಿಸಿ, 5ನೇ ದಿನಕ್ಕೆ ಗಣೇಶನನ್ನು ವಿಸರ್ಜನೆ ಮಾಡಲು ಗಣೇಶ ಮೂರ್ತಿಯನ್ನು ಮೇಲೆತ್ತಲು ಹೋದವರಿಗೆ ಆಶ್ಚರ್ಯವೋ ಆಶ್ಚರ್ಯ.

ಧಾರವಾಡ(ಸೆ.04): ನಾಡಿನೆಲ್ಲೆಡೆ ಗಣಪತಿ ಬಪ್ಪಾ ಮೋರಯಾ ಘೋಷಣೆ ಮುಳುಗುತ್ತಿದೆ. ಹಳ್ಳಿಗಳಲ್ಲಿ, ನಗರದ ಗಲ್ಲಿಗಳಲ್ಲಿ ವಿನಾಯಕನ ಆರಾಧನೆ ಜೋರಾಗಿದೆ. ಧಾರವಾಡದಲ್ಲೂ ಕೂಡ ಗಣೇಶನ ಉತ್ಸವ ಜೋರಾಗಿದೆ. ಐದು ದಿನಗಳ ಕಾಲ ಸಂಪ್ರದಾಯದಂತೆ ಪೂಜೆ ಪುರಸ್ಕಾರ ನೆರವೆರಸಿ, ಇನ್ನೆನ್ನು ಐದನೇಯ ದಿನಕ್ಕೆ ಗಣೇಶನನ್ನು ವಿಸರ್ಜನೆ ಮಾಡಬೇಕೆಂದು ಮೂರ್ತಿಯನ್ನು ಮೇಲೆತ್ತಲು ಹೋದಾಗ ಹೆಬ್ಬಳ್ಳಿ ಗ್ರಾಮಸ್ಥರಿಗೆ ಅಚ್ಚರಿ ಕಾದಿತು.

ಎಷ್ಟೇ ಪ್ರಯತ್ನ ಮಾಡಿದರೂ ಗಣೇಶ ಮಾತ್ರ ಮೇಲೆ ಬರ್ತಾಯಿಲ್ಲ. ಹೀಗಾಗಿ ಈ ಅಚ್ಚರಿ ನೋಡಲು ಜನ ಸಾಗರವೇ ಹರಿದು ಬರ್ತಿದೆ. ಗ್ರಾಮದ ಮಾರುತಿ ಭೀಮಕ್ಕಣ್ಣವರ ಮನೆಯಲ್ಲಿ ಅಗಸ್ಟ್ ‌25 ರಂದು ಸಂಪ್ರದಾಯದಂತೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಆ ಕುಟುಂಬದ ಹಿರಿಯರು ಐದು ದಿನಕ್ಕೆ ಗಣೇಶನನ್ನು ವಿಸರ್ಜನೆ ಮಾಡುವುದು ಸಂಪ್ರದಾಯ ಹಾಗಾಗಿ ಈವರು ಸಹ ಪ್ರತಿವರ್ಷದಂತೆ ಐದನೇಯ ದಿನಕ್ಕೆ ಗಣೇಶನನ್ನು ವಿಸರ್ಜನೆ ಮಾಡಬೇಕೆಂದು ಪೂಜೆ ಪುರಸ್ಕಾರ ನೆರವೇರಿಸಿ, ಶ್ರೀ ಗಣೇಶನನ್ನು ಮೇಲೆತ್ತಲು ಹೋದಾಗ ಗಣೇಶನಮೂರ್ತಿ ಮೇಲೆ ಬರದೇ ಪವಾಡ ಸೃಷ್ಟಿ ಮಾಡಿದ್ದಾನಂತೆ. ಅದು 35 ವರ್ಷದ ಅದೇ ಮನೆಯ ಯುವಕ ಗಣೇಶನನ್ನು ಮೇಲೆ ಎತ್ತಲು ಆಗದೇ ಪರದಾಡಿರೋದು‌ ಅಚ್ಚರಿಗೆ ಕಾರಣವಾಗಿದೆ.

ಎಷ್ಟೇ ಪ್ರಯತ್ನ ಮಾಡಿದ್ರು ಗಣೇಶನ ಮೂರ್ತಿ ಮಾತ್ರ ಮೇಲೆತ್ತಲು ಆಗ್ತಾಯಿಲ್ಲಾ. ಕುಟುಂಬಸ್ಥರು ಹಾಗೂ ಗ್ರಾಮದ ಹಿರಿಯರು ಸೇರಿಕೊಂಡು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಗ್ರಾಮದ  ಶ್ರೀ ಗೋಂದಾವಲಿ ಮಠದ ಶ್ರೀ ದತ್ತಾವಧೂತ್ತರಿಗೆ ವಿಷಯ ತಿಳಿಸಿದ್ದಾರೆ. ಅವರು ‌11 ನೇ ದಿನಕ್ಕೆ ಗಣೇಶನನ್ನು ಕಳಿಸೋದಾಗಿ ಹೇಳಿದ್ದಾರೆ ಅಂದು ಯಾಗ ಯಜ್ಞಗಳನ್ನು ಮಾಡಿ ಸಾರ್ವಜನಿಕರಿಗೆ ಅನ್ನಪ್ರಸಾದವನ್ನು ಮಾಡಿ ಗಣೇಶನನ್ನು ಮೇಲೆತ್ತೋನ ಎಂದು ಹೇಳಿದ್ದಾರಂತೆ. ಹಾಗಾಗಿ ಗಣೇಶನನ್ನು ಮುಟ್ಟದೇ ಕೇವಲ ಪೂಜೆ ಪುರಸ್ಕಾರ ಮಾಡ್ತಾಯಿದ್ದಾರೆ. ಒಟ್ನಲ್ಲಿ ಈ ಪವಾಡ ಗಣೇಶನನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನ ತಂಡೋಪ ತಂಡವಾಗಿ ಹರಿದು ಬರ್ತಿದೆ.

click me!