
ಸೊಳ್ಳೆ ಕಚ್ಚಿದಾಗ ಅದನ್ನು ಹೊಡೆದು ಕೊಲ್ಲುವುದು ಸಾಮಾನ್ಯ. ಜಪಾನ್'ನ ವ್ಯಕ್ತಿಯೊಬ್ಬರು ಕಚ್ಚಿದ ಸೊಳ್ಳೆ ಯೊಂದನ್ನು ಸಹಜವಾಗಿ ಹೊಡೆದು ಕೊಂದಿದ್ದಾರೆ. ಆದರೆ, ಅಷ್ಟಕ್ಕೇ ಬಿಡದೇ ಆ ಸೊಳ್ಳೆಯನ್ನು ಕೊಂದ ಸುದ್ದಿಯನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆ ಟ್ವೀಟ್ ನೋಡಿ, ಅದೊಂದು ನಿಂದನಾತ್ಮಕ ಟ್ವೀಟ್ ಎಂದು ಪರಿಗಣಿಸಿ ಅವರ ಖಾತೆಯನ್ನೇ ಟ್ವೀಟರ್ ಬ್ಲಾಕ್ ಮಾಡಿದೆ. ಮತ್ತೊಂದು ಟ್ವೀಟರ್ ಖಾತೆ ತೆರೆದು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಹೊಸ ಖಾತೆಯ ಟ್ವೀಟ್ ಈಗ ಭಾರೀ ವೈರಲ್ ಆಗಿದೆ.
ಆನ್ ಲೈನ್ ನಿಂದನೆ ನಿಯಂತ್ರಿಸುವ ನಿಟ್ಟಿನಲ್ಲಿ, ಅಪರಾಧಿಕ ಶಬ್ದಗಳನ್ನು ಸ್ವಯಂ ಪತ್ತೆಹಚ್ಚಿ, ಕ್ರಮಕೈಗೊಳ್ಳುವ ವ್ಯವಸ್ಥೆ ಟ್ವೀಟರ್‌ನಲ್ಲಿ ಅಳವಡಿಕೆಯಾಗಿದೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.