ಕಡೆಗೂ ಉಗ್ರರ ಕಪಿಮುಷ್ಟಿಯಿಂದ ಹೊರಬಂದ ಪತ್ರಕರ್ತ

By Web DeskFirst Published Oct 27, 2018, 11:52 AM IST
Highlights

ಸಿರಿಯಾ ಭಯೋತ್ಪಾದಕರ ಕಪಿಮುಷ್ಟಿಯಲ್ಲಿ ಜಪಾನ್ ಪತ್ರಕರ್ತ | ಭಯೋತ್ಪಾದಕರಿಂದ ನರಕಯಾತನೆ ಅನುಭವಿಸಿದ ಪತ್ರಕರ್ತ | 

ಟೋಕಿಯೋ (ಅ. 27): ಸಿರಿಯಾದ ಭಯೋತ್ಪಾದಕರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ಜಪಾನ್ ಪತ್ರಕರ್ತ ಜುಂಪೈ, 40 ತಿಂಗಳ ಬಳಿಕ ಬಿಡುಗಡೆಯಾಗಿದ್ದಾರೆ.

ಉಗ್ರರ ಕಪಿಮುಷ್ಠಿಯಲ್ಲಿದ್ದ ವೇಳೆಗಿನ ತಮ್ಮ ಸುದೀರ್ಘ ಭಯಾನಕ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ. ಹವ್ಯಾಸಿ ಪತ್ರಕರ್ತ ಜುಂಪೈ ಅವರು ವರದಿಗಾರಿಕೆಗಾಗಿ 3 ವರ್ಷಗಳ ಹಿಂದೆ ಸಿರಿಯಾಕ್ಕೆ ತೆರಳಿದ್ದಾಗ ಅಲ್‌ಖೈದಾ ಜತೆ ನಂಟು ಹೊಂದಿದ್ದ ಸಂಘ ಟನೆಯೊಂದು ಅವರೊಬ್ಬ ಬೇಹುಗಾರ ಎಂಬ ಸಂದೇ ಹದಿಂದ ಒತ್ತೆ ಇಟ್ಟುಕೊಂಡಿತ್ತು.

‘ನನ್ನನ್ನು 1.5 ಮೀಟರ್ ಎತ್ತರ ಹಾಗೂ 1 ಮೀಟರ್ ಅಗಲದ ಕೋಣೆಯಲ್ಲಿ ಇಟ್ಟಿದ್ದರು. ಸ್ನಾನ ಮಾಡಲೂ ಬಿಟ್ಟಿರಲಿಲ್ಲ. ಯಾವುದೇ ರೀತಿಯ ಶಬ್ದ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದರು. ಸ್ನಾನ ಮಾಡದೇ ತಲೆಯಲ್ಲಿ ತುರಿಕೆ ಉಂಟಾಗಿತ್ತು.ಮೂಗಿನಿಂದ ಉಸಿರಾದಂತೆ, ಲಟಿಕೆ ತೆಗೆಯದಂತೆ, ನಿದ್ರೆಯಲ್ಲಿ ಒದ್ದಾಡದಂತೆ ಸೂಚನೆ ಇತ್ತು’ ಎಂದು ಅವರು ವಿವರಿಸಿದ್ದಾರೆ. 

click me!