ಜಂತಕಲ್ ಮೈನಿಂಗ್ ಪ್ರಕರಣ: ದಾಖಲೆಗಳ ಸಮೇತ ಎಸ್ಐಟಿ ಮುಂದೆ ಹಾಜರಾದ ಜನಾರ್ದನ್ ರೆಡ್ಡಿ

By Suvarna Web DeskFirst Published Jun 13, 2017, 6:07 PM IST
Highlights

150 ಕೋಟಿ ಗಣಿಕಪ್ಪ ಪ್ರಕರಣ ಸಂಬಂಧಪಟ್ಟಂತೆ ಬೆಂಗಳೂರಿನ ಎಸ್ಐಟಿ ಕಚೇರಿಗೆ ದಾಖಲೆಗಳ ಸಮೇತ ಜನಾರ್ದನ ರೆಡ್ಡಿ ಹಾಜರಾಗಿದ್ದಾರೆ.

ಬೆಂಗಳೂರು (ಜೂ.13): 150 ಕೋಟಿ ಗಣಿಕಪ್ಪ ಪ್ರಕರಣ ಸಂಬಂಧಪಟ್ಟಂತೆ ಬೆಂಗಳೂರಿನ ಎಸ್ಐಟಿ ಕಚೇರಿಗೆ ದಾಖಲೆಗಳ ಸಮೇತ ಜನಾರ್ದನ ರೆಡ್ಡಿ ಹಾಜರಾಗಿದ್ದಾರೆ.

ಹೆಬ್ಬಾಳದಲ್ಲಿರುವ ಎಸ್​ಐಟಿ ಕಚೇರಿಗೆ ಹಾಜರಾದ ಜನಾರ್ದನ್ ರೆಡ್ಡಿ 150 ಕೋಟಿ ರೂ. ಗಣಿ ಕಪ್ಪದ ದಾಖಲೆ ನೀಡಲು ಬಂದಿದ್ದಾರೆ. ಕಳೆದ 2006ರಲ್ಲಿ ನಡೆದ ಜಂತಕಲ್ ಮೈನಿಂಗ್ ಗುತ್ತಿಗೆ ಪ್ರಕರಣದಲ್ಲಿ ಕುಮಾರಸ್ವಾಮಿಯವರಿಗೆ 150 ಕೋಟಿ ಲಂಚ ನೀಡಲಾಗಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದರು. ಕುಮಾರಸ್ವಾಮಿ ವಿರುದ್ಧದ ಆರೋಪಕ್ಕೆ ಪೂರಕವಾಗಿ ದಾಖಲೆಗಳನ್ನು ಸಲ್ಲಿಸುವಂತೆ ವಿಶೇಷ ತನಿಖಾ ತಂಡ, ಮಾಜಿ ಸಚಿವ ಜನಾರ್ದನ ರೆಡ್ಡಿಯವರಿಗೆ  ಕೋರಿತ್ತು.

ಶೀಘ್ರದಲ್ಲಿಯೇ ಎಸ್‌ಐಟಿಗೆ ದಾಖಲೆಗಳನ್ನು ಸಲ್ಲಿಸುತ್ತೇನೆ ಎಂದು ಜನಾರ್ದನ ರೆಡ್ಡಿ ಕಾಲಾವಕಾಶ ಕೋರಿದ್ದರು. ಹೀಗಾಗಿ ಇವತ್ತು ಎಸ್ಐಟಿ ಕಚೇರಿಗೆ ದಾಖಲೆಗಳ ಸಮೇತ ಆಗಮಿಸಿದ್ದಾರೆ.

click me!