ಪಿಒಕೆ ಭಾರತದ ಅವಿಭಾಜ್ಯ ಅಂಗ: ಪಾಕಿಸ್ತಾನ ಅಲ್ಲಿಂದ ತೆರಳಲಿ: ಬ್ರಿಟನ್‌ ಸಂಸದ

By Web DeskFirst Published Sep 16, 2019, 11:33 AM IST
Highlights

ಬ್ರಿಟನ್‌ನಲ್ಲಿರುವ ಕಾಶ್ಮೀರ ಪಂಡಿತರು ಏರ್ಪಡಿಸಿದ್ದ ‘ಬಲಿದಾನ ದಿವಸ’ ಕಾರ್ಯಕ್ರಮವನ್ನುದ್ದೇಶಿಸಿ ಮಾತು| ಪಿಒಕೆ ಭಾರತದ ಅವಿಭಾಜ್ಯ ಅಂಗ: ಪಾಕಿಸ್ತಾನ ಅಲ್ಲಿಂದ ತೆರಳಲಿ: ಬ್ರಿಟನ್‌ ಸಂಸದ

ಲಂಡನ್‌[ಸೆ.16]: ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಸಂಪೂರ್ಣ ಕಾಶ್ಮೀರದ ಮೇಲೆ ಭಾರತ ತನ್ನ ಸಾರ್ವಭೌಮತ್ವ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಹೊರ ನಡೆಯಬೇಕು ಎಂದು ಪಾಕಿಸ್ತಾನಕ್ಕೆ ಬ್ರಿಟನ್‌ ಸಂಸದ ಬಾಬ್‌ ಬ್ಲಾಕ್‌ಮನ್‌ ಕರೆ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಈವರೆಗೆ ಏನೇನಾಯ್ತು? ಇಲ್ಲಿದೆ ಎಲ್ಲಾ ಸುದ್ದಿಗಳು

ಬ್ರಿಟನ್‌ನಲ್ಲಿರುವ ಕಾಶ್ಮೀರ ಪಂಡಿತರು ಏರ್ಪಡಿಸಿದ್ದ ‘ಬಲಿದಾನ ದಿವಸ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕನ್ಸರ್ವೇಟಿವ್‌ ಪಕ್ಷದ ಸಂಸದ ಬಾಬ್‌ ಬ್ಲಾಕ್‌ಮನ್‌ ಅವರು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ಕ್ರಮದ ವಿರುದ್ಧ ಪಾಕಿಸ್ತಾನ ವಿಶ್ವಸಂಸ್ಥೆಯ ಮೊರೆ ಹೋಗಲು ಯೋಜಿಸಿದ ಪಾಕಿಸ್ತಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!