ಐಸಿಯುನಲ್ಲೇ ಜೇಟ್ಲಿಗೆ ಚಿಕಿತ್ಸೆ: ಆರೋಗ್ಯ ಸ್ಥಿತಿ ಇನ್ನೂ ಗಂಭೀರ

Published : Aug 14, 2019, 12:19 PM IST
ಐಸಿಯುನಲ್ಲೇ ಜೇಟ್ಲಿಗೆ ಚಿಕಿತ್ಸೆ: ಆರೋಗ್ಯ ಸ್ಥಿತಿ ಇನ್ನೂ ಗಂಭೀರ

ಸಾರಾಂಶ

ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಹಣಕಾಸು ಸಚಿವ ಜೇಟ್ಲಿ| ಐಸಿಯುನಲ್ಲೇ ಜೇಟ್ಲಿಗೆ ಚಿಕಿತ್ಸೆ: ಆರೋಗ್ಯ ಸ್ಥಿತಿ ಇನ್ನೂ ಗಂಭೀರ

ನವ​ದೆ​ಹ​ಲಿ[ಆ.14]: ಉಸಿ​ರಾ​ಟದ ತೊಂದ​ರೆಯಿಂದಾಗಿ ದೆಹ​ಲಿಯ ಏಮ್ಸ್‌ ಆಸ್ಪ​ತ್ರೆಗೆ ದಾಖ​ಲಾ​ಗಿ​ರುವ ಮಾಜಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿಯವ​ರಿಗೆ ಐಸಿ​ಯು​ನಲ್ಲಿ ಚಿಕಿ​ತ್ಸೆ ಮುಂದು​ವ​ರಿ​ಸ​ಲಾ​ಗಿದ್ದು, ಅವರ ಆರೋಗ್ಯ ಗಂಭೀ​ರ​ವಾ​ಗಿ​ಯೇ ಮುಂದುವರೆದಿದೆ.

ಆದರೆ ಹೃದಯ ಬಡಿತ ಹಾಗೂ ರಕ್ತ ಸಂಚಾರ ಸ್ಥಿರ​ವಾ​ಗಿದೆ ಎಂದು ಆಸ್ಪತ್ರೆ ಮೂಲ​ಗಳು ತಿಳಿ​ಸಿವೆ. 68 ವರ್ಷ​ದ ಜೇಟ್ಲಿ​ಯ​ವ​ರನ್ನು ಉಸಿ​ರಾ​ಟದ ತೊಂದ​ರೆ​ಯಿಂದಾಗಿ ಆ.9 ​ರ ಬೆಳಿಗ್ಗೆ 10 ಗಂಟೆಗೆ ಏಮ್ಸ್‌ಗೆ ದಾಖಲು ಮಾಡ​ಲಾ​ಗಿತ್ತು.

ಬಹು ವೈದ್ಯರ ತಂಡ ಜೇಟ್ಲಿ ಆರೋ​ಗ್ಯದ ಮೇಲೆ ನಿಗಾ ವಹಿ​ಸಿ​ದ್ದು, ಆರೋಗ್ಯ ಪರಿ​ಸ್ಥಿತಿ ಗಂಭೀ​ರ​ವಾ​ಗಿ​ದ್ದರೂ ಚಿಕಿ​ತ್ಸೆಗೆ ಸ್ಪಂದಿ​ಸು​ತ್ತಿ​ದ್ದಾರೆ ಎಂದು ಏಮ್ಸ್‌ ಮೂಲ​ಗ​ಳು ತಿಳಿ​ಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cockroach Janata Part: ಕಾಕ್ರೋಚ್ ಭಯ ಕಾಂಗ್ರೆಸ್‌ಗೆ ಹೊರತು ಬಿಜೆಪಿಗಲ್ಲ; ಪ್ರಲ್ಹಾದ್ ಜೋಶಿ ಕೊಟ್ಟ ಉತ್ತರ ಕೇಳಿ ಶಾಕ್!
India News Live: IPL 2026 - ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!