ನವಾಜ್ ಶರೀಫ್ ಪತ್ನಿ ಇನ್ನಿಲ್ಲ: ಜೈಲಿಂದ ಹೊರ ಬರ್ತಾರೋ ಗೊತ್ತಿಲ್ಲ!

By Web DeskFirst Published Sep 11, 2018, 6:07 PM IST
Highlights

ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಗೆ ಪತ್ನಿ ವಿಯೋಗ! ಕ್ಯಾನ್ಸರ್ ನಿಂದ ಬಳಲುತ್ತಿದ್ದ ನವಾಜ್ ಪತ್ನಿ ಬೇಗಂ ಖುಲ್ಸುಂ! ಲಂಡನ್ ಆಸ್ಪತ್ರೆಯಲ್ಲಿ ನಿಧನರಾದ ಬೇಗಂ ಖುಲ್ಸುಂ! ಪಾಕ್ ಜೈಲಿನಲ್ಲಿರುವ ನವಾಜ್, ಪುತ್ರಿ ಮರಿಯಂ ನವಾಜ್ 
 

ಲಂಡನ್(ಸೆ.11): ಭ್ರಷ್ಟಾಚಾರ ಆರೋಪದಲ್ಲಿ ಜೈಲುಪಾಲಾಗಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಶರೀಫ್ ಅವರ ಪತ್ನಿ ವಿಧಿವಶರಾಗಿದ್ದಾರೆ.

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬೇಗಂ ಖುಲ್ಸುಂ ಶರೀಫ್ ಲಂಡನ್ ನ ಹ್ಯಾರಿ ಸ್ಟ್ರೀಟ್ ಕ್ಲಿನಿಕ್ ನಲ್ಲಿ ನಿಧನ ಹೊಂದಿದರು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ನವಾಜ್ ಸಹೋದರ, ಪಿಎಂಎಲ್ ಅಧ್ಯಕ್ಷ ಶೆಹಬಾಜ್ ಶರೀಫ್, 68 ವರ್ಷದ ಖುಲ್ಸುಂ ಶರೀಫ್ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಪತಿ ನವಾಜ್ ಶರೀಫ್, ಮಗಳು ಮರಿಯಂ ನವಾಜ್ ಹಾಗೂ ಅಳಿಯ ಕ್ಯಾಪ್ಟನ್ ಮೊಹ್ಮದ್ ಸಫ್ದಾರ್ ಸದ್ಯ ಪಾಕಿಸ್ತಾನದ ಜೈಲಿನಲ್ಲಿದ್ದು, ಖುಲ್ಸುಂ ವರ ಮೃತದೇಹವನ್ನು ಪಾಕಿಸ್ತಾನಕ್ಕೆ ಕರೆತಂದ ಬಳಿಕ ಮೂವರಿಗೂ ಮಧ್ಯಂತರ ಪೆರೋಲ್ ದೊರೆಯುವ ನಿರೀಕ್ಷೆ ಇದೆ.

ಇನ್ನು ಖುಲ್ಸುಂ ಸಾವಿಗೆ ಸಂತಾಪ ಸೂಚಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಮೃದೇಹವನ್ನು ಪಾಕಿಸ್ತಾನಕ್ಕೆ ರವಾನೆ ಮಾಡಲು ಅಗತ್ಯ ಏರ್ಪಾಡು ಮಾಡುವಂತೆ ಲಂಡನ್ ನಲ್ಲಿರುವ ಪಾಕ್ ಹೈಕಮಿಷನರ್ ಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.

click me!