
ಹಾಸನ[ಸೆ.11]: ನಾನು 10 ತಿಂಗಳಲ್ಲಿ ಪ್ರಧಾನಿಯಾಗಿ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟೂ ಮಾಡಿದ್ದೇನೆ. ಹಾಗೆಯೇ ಕಪ್ಪು ಚುಕ್ಕೆಯಿಲ್ಲದೇ ಹೊರಬಂದಿದ್ದೇನೆ. ನಾನು ಪ್ರಧಾನಿಯಾಗಿದ್ದಾಗ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆದಿತ್ತು. ಆಗ ಯಾವುದೇ ರಕ್ತಪಾತ ನಡೆದಿರಲಿಲ್ಲ. ಇಂದು ಅಲ್ಲಿ ಚುನಾವಣೆ ಆದ್ರೆ ರಕ್ತಪಾತ ನಡೆಯುತ್ತೆ. ಪ್ರಧಾನಿಯಾಗಿ ಮೋದಿಯ ಸಾಧನೆ ಏನು ಎಂದು ಎಚ್’ಡಿಡಿ ಗುಡುಗಿದ್ದಾರೆ.
ಹೊಳೆನರಸೀಪುರದಲ್ಲಿ "ನಮ್ಮೂರ ದ್ಯಾವಪ್ಪ" ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗೌಡರು, ನಾನು ಸಾಮಾನ್ಯ ರೈತನ ಮಗನಾಗಿ ಹತ್ತು ಹಲವು ನೋವು ಉಂಡಿದ್ದೇನೆ. ನಾನು ಇಷ್ಟು ಎತ್ತರಕ್ಕೆ ಬೆಳೆಯಲು ನನ್ನ ಕ್ಷೇತ್ರದ ಜನರು, ತಂದೆ ತಾಯಿ ಆಶೀರ್ವಾದವೂ ಕಾರಣ ಎಂದು ಹೇಳಿದ್ದಾರೆ.
58 ವರ್ಷಗಳ ರಾಜಕೀಯ ಜೀವನದಲ್ಲಿ ನಾನು 2 ಬಾರಿ ಸೋತಿದ್ದೇನೆ, ಆದರೆ ಯಾವತ್ತೂ ಹೆದರಿ ಹಿಂದೆ ಸರಿದಿಲ್ಲ. ಜಗತ್ತಿನಲ್ಲಿ ಒಳ್ಳೆಯವರು ಕೆಟ್ಟವರು ಇರೋದು ಸೃಷ್ಟಿ ನಿಯಮ. ಆದರೆ ವೈಯಕ್ತಿಕ ದ್ವೇಷ ಇರಬಾರದು. ನನ್ನ ವಿರುದ್ಧ ಅನೇಕರು ಸಾಕಷ್ಟು ಅಪಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.