
ಬೆಂಗಳೂರು (ನ.03): ಇವತ್ತಿನ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ಮುಖಂಡ ನಟ, ಜಗ್ಗೇಶ್ ಬಿಜೆಪಿ ಪರ ಮತಯಾಚನೆ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡರು ಓಟ್ ಕೇಳಲು ಬಂದ್ರೂ ಮತಹಾಕಬೇಡಿ ಎಂದು ಹೇಳುವ ಭರದಲ್ಲಿ ದೇವೇಗೌಡರ ಬಗ್ಗೆ ಮಿಮಿಕ್ರಿ ಮಾಡಿದರು. ಇದಕ್ಕೆ ಗೌಡರು ಕೂಡ ತಿರುಗೇಟು ನೀಡಿದ್ದಾರೆ.
ನಿನ್ನೆಯಿಂದ ರಾಜ್ಯದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಶುರುವಾಗಿದೆ. ಇವತ್ತು ತುಮಕೂರಿನ ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ ಜೆಡಿಎಸ್ ಗೆ ಮತಹಾಕಿ ಎಂದು ದೇವೇಗೌಡರು ಕೇಳಿಕೊಂಡರೂ ಹಾಕಬೇಡಿ. ಜೆಡಿಎಸ್'ನವರು ಒಕ್ಕಲಿಗರ ಓಟ್ ಬ್ಯಾಂಕ್ ಮುಂದಿಟ್ಟುಕೊಂಡು ಮತ ಕೇಳ್ತಾರೆ ಎಂದು ದೇವೇಗೌಡರ ಬಗ್ಗೆ ಜಗ್ಗೇಶ್ ಮಿಮಿಕ್ರಿ ಮಾಡಿ ನೆರೆದಿದ್ದ ಜನರನ್ನು ನಗಿಸಿದರು. ಈ ಹೇಳಿಕೆಗೆ ನೆಲಮಂಗಲದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ. ಜಗ್ಗೇಶ್ ದೊಡ್ಡವರು, ಚಿತ್ರನಟರು ಅವರು ತುಂಬಾ ದೊಡ್ಡವರು. ಜಗ್ಗೇಶ್ ಬಗ್ಗೆ ನಾನು ಮಾತನಾಡಲು ಸಾಧ್ಯನಾ? ಅಂತ ಟಾಂಗ್ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.