ಎಲ್‌. ಎನ್‌. ಶಾಸ್ತ್ರಿಯವರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ ಜಗ್ಗೇಶ್

By Suvarna Web DeskFirst Published Aug 18, 2017, 8:20 PM IST
Highlights

ಎಲ್‌. ಎನ್‌. ಶಾಸ್ತ್ರಿ ಕನ್ನಡದ ಪ್ರಸಿದ್ಧ ಗಾಯಕ. ಸುಮಾರು 3000 ಕ್ಕೂ ಗೀತೆಗಳನ್ನು ಇವರು ಹಾಡಿದ್ದಾರೆ. 1996 ರಲ್ಲಿ ತೆರೆಕಂಡಿದ್ದ 'ಅಜಗಜಾಂತರ' ಸಿನಿಮಾ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಜಗ್ಗೇಶ್‌ ಅವರ ಅನೇಕ ಚಿತ್ರಗಳಲ್ಲಿ ಶಾಸ್ತ್ರಿ ಕೆಲಸ ಮಾಡಿದ್ದಾರೆ. ಸದ್ಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆರ್ಥಿಕ ನೆರವು ಅವಶ್ಯಕತೆ ಇದೆ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಇದನ್ನು ಗಮನಿಸಿದ ನಟ ಜಗ್ಗೇಶ್‌, ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ.

ಬೆಂಗಳೂರು (ಆ.18): ಎಲ್‌. ಎನ್‌. ಶಾಸ್ತ್ರಿ ಕನ್ನಡದ ಪ್ರಸಿದ್ಧ ಗಾಯಕ. ಸುಮಾರು 3000 ಕ್ಕೂ ಗೀತೆಗಳನ್ನು ಇವರು ಹಾಡಿದ್ದಾರೆ. 1996 ರಲ್ಲಿ ತೆರೆಕಂಡಿದ್ದ 'ಅಜಗಜಾಂತರ' ಸಿನಿಮಾ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಜಗ್ಗೇಶ್‌ ಅವರ ಅನೇಕ ಚಿತ್ರಗಳಲ್ಲಿ ಶಾಸ್ತ್ರಿ ಕೆಲಸ ಮಾಡಿದ್ದಾರೆ. ಸದ್ಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆರ್ಥಿಕ ನೆರವು ಅವಶ್ಯಕತೆ ಇದೆ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಇದನ್ನು ಗಮನಿಸಿದ ನಟ ಜಗ್ಗೇಶ್‌, ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ.

ಟ್ವಿಟರ್‌ನಲ್ಲಿ ಈ ಕುರಿತು ಹೇಳಿರುವ ಜಗ್ಗೇಶ್‌, ಶಾಸ್ತ್ರಿಯವರು ಭಾವಜೀವಿ, 'ಭಂಡ ನನ್ನ ಗಂಡ' ಚಿತ್ರಕ್ಕೆ ರಾತ್ರಿ ಎಲ್ಲಾ ನನ್ನ ಜೊತೆ ಕುಳಿತು ' ಅಂತಿಂಥ ಗಂಡು ನಾನಲ್ಲಾ' ಹಾಡಲು ಸಹಾಯ ಮಾಡಿದ್ದರು. ನನ್ನ ಅನೇಕ ಚಿತ್ರಕ್ಕೆ ಇವರೇ ಹಾಡುತ್ತಿದ್ದರು. ನನಗೆ ಹಾಡಿದ ಮಹನೀಯ, ನಾನು ಸಹಾಯ ಮಾಡುವೆ. ಸಂಬಂಧಪಟ್ಟವರಿಗೆ ಈಗಲೇ ಮಾತಾಡುವೆ. ಇವರ ಅನಾರೋಗ್ಯದ ಬಗ್ಗೆ ಕೇಳಿ ತುಂಬ ದುಃಖವಾಯಿತು, ದೇವರಂತ ಮನುಷ್ಯನಿಗೆ ಈ ಪರೀಕ್ಷೆ ಏಕೆ? ರಾಯರ ದಯೇ ಇರಲಿ ಇವರ ಮೇಲೆ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.  

 

ನನಗೆ ಹಾಡಿದ ಮಹನೀಯ:)ನಾನು ಸಹಾಯ ಮಾಡುವೆ! ಸಂಬಂಧಪಟ್ಟವರಿಗೆ ಈಗಲೆ ಮಾತಾಡುವೆ!ದೇವರೆ ತುಂಬ ದುಖ್ಖವಾಯಿತು!ದೇವರಂತ ಮನುಷ್ಯನಿಗೆ ಈ ಪರೀಕ್ಷೆ!ರಾಯರದಯೇ ಇರಲಿ ಇವರ ಮೇಲೆ. https://t.co/YBsPnbCDD6

— ನವರಸನಾಯಕ ಜಗ್ಗೇಶ್ (@Jaggesh2) August 18, 2017

 

 

 

 

 

click me!