
ಬೆಂಗಳೂರು(ಜೂ.27): ಗೋಹತ್ಯೆ ಪರವಾಗಿರುವವರಿಗೆ ತಮ್ಮ ಡೈಲಾಗ್ ಮೂಲಕ ಟಾಂಗ್ ಕೊಟ್ಟ ನವರಸ ನಾಯಕ 'ಹಿಂದೂಗಳ ಬಗ್ಗೆ ದೇವರು, ನಂಬಿಕೆ ಬಗ್ಗೆ ಮಾಧ್ಯಮಗಳು ಗಂಟೆಗಟ್ಟಲೆ ಚರ್ಚೆ ಮಾಡ್ತಾರೆ. ಇದನ್ನ ಜನ ಕಣ್ಣು ಬಿಟ್ಟು ನೋಡ್ತಾರೆ. ಈ ಮನಸ್ಥಿತಿ ಜನ ಬದಲಿಸಿಕೊಳ್ಳಬೇಕು. ಭಗವದ್ಗೀತೆ ಎಲ್ಲಿದೆ. ದೇವರು ಎಲ್ಲಿದ್ದಾನೆ. ನಾವು ಗೋಮಾಂಸ ತಿನ್ನುತ್ತೇವೆ ಅಂತಾರೆ.ಆದರೆ ಬೇರೆ ಧರ್ಮದ ಬಗ್ಗೆ ಯಾರಾದರೂ ಮಾತಾನಾಡಿದರೆ ದೊಡ್ಡ ಗಲಾಟೆಗಳೆ ನಡೆದು ಹೋಗ್ತವೆ' ಎಂದು ಗೋಮಾಂಸ ಸೇವಿಸುವವರ ವಿರುದ್ಧ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರೊಬ್ಬರು ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡೊಲ್ಲ. ಹಿಂದೂಗಳು ಮಾತ್ರ ಇಂದು ಕಲಬೆರೆಕೆಗಳು ಆಗಿದ್ದಾರೆ. ತಾವು ಬೆಂಗಳೂರಿನಲ್ಲಿ ನಡೆದ ಕಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಕುರಿತು ಜಾತಿಗುರುತು ಕಟ್ಟಿರುವುದಕ್ಕೆ ಟ್ವೀಟ್'ನಲ್ಲಿ ಪ್ರಶ್ನಿಸಿರುವ ಅವರು, ನಾನುವಿಶ್ವಕ್ಕೆ ಬಂದಿದ್ದೇ ಆ ಕುಲದಿಂದ. ಅದರಲ್ಲಿ ಭಾಗವಹಿಸಿದ್ದು ಜಾತಿಗುರುತೆ. ನನ್ನಕುಲ ಮನುಕುಲ. ಕೆಲವರಿಗೆ ಬೆಂಗಳೂರಿನ ಸವಲತ್ತು ಬೇಕು ಆದರೆ ಈ ನಾಡು ಕಟ್ಟಿದ ಆಚರಣೆಯನ್ನು ವಿರೋಧಿಸುತ್ತಾರೆ' ಎಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.