
ನವದೆಹಲಿ: ಸೆ.1ರಂದು ನಕಲಿ (ಶೆಲ್) ಕಂಪನಿಗಳ 1 ಲಕ್ಷ ಅನರ್ಹ ನಿರ್ದೇಶಕರ ಹೆಸರನ್ನು ‘ಹೆಸರಿಸಿ..ಅವಮಾನಿಸಿ’ (ನೇಮ್ ಆ್ಯಂಡ್ ಶೇಮ್) ನೀತಿಯ ಅನ್ವಯ 2 ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ, ಈಗ ಮತ್ತೆ ಇನ್ನೂ 2 ಲಕ್ಷ ಅನರ್ಹ ನಿರ್ದೇಶಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇವರಲ್ಲಿ ಕರ್ನಾ ಟಕದ 20,924 ಅನರ್ಹ ನಿರ್ದೇಶಕರ ಹೆಸರುಗಳೂ ಸೇರಿವೆ. 2 ಸತತ ವರ್ಷಗಳ ವಿತ್ತೀಯ ವಿವರಗ ಳನ್ನು ಕೇಂದ್ರ ಕಂಪನಿ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸದ ಕಂಪನಿಗಳ ಪಟ್ಟಿ ಮತ್ತು ಅವುಗಳ ನಿರ್ದೇಶಕರ ಹೆಸರುಗಳು ಇದರಲ್ಲಿ ಇವೆ.
ಇವುಗಳನ್ನು ನಕಲಿ ಕಂಪನಿ ಗಳು ಮತ್ತು ಅದರ ನಿರ್ದೇಶಕರನ್ನು ಅನರ್ಹ ನಿರ್ದೇಶಕರು ಎಂದು ಪರಿಗಣಿಸಲಾಗಿದೆ.
ಕರ್ನಾಟಕದ ಪ್ರಮುಖರು:
ಜಗದೀಶ್ ಶುಗರ್ಸ್‌ನ ಶಿಲ್ಪಾ ಶೆಟ್ಟರ್, ಸಂಕಲ್ಪ ಶೆಟ್ಟರ್, ಪ್ರಶಾಂತ್ ಶೆಟ್ಟರ್ (ಮಾಜಿ ಸಿಎಂ ಜಗದೀಶ ಶೆಟ್ಟರ್ ಕುಟುಂಬ), ಲಕ್ಷ್ಮಣ ರಾವ್ ಜಾರಕಿಹೊಳಿ ಶುಗರ್ಸ್‌ನ ರಮೇಶ ಜಾರಕಿಹೊಳಿ, ಲಕ್ಕಣ್ಣ ಜಾರಕಿಹೊಳಿ, ಲಕ್ಷ್ಮಣರಾವ್ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ, ಸುವರ್ಣ ಜಾರಕಿಹೊಳಿ (ಸಚಿವ ಜಾರಕಿಹೊಳಿ ಕುಟುಂಬ), ರಾಯಲ್ ಶುಗರ್ಸ್ ಲಿಮಿಟೆಡ್‌ನ ರವಿಕಾಂತ ಪಾಟೀಲ, ಬೀರೇಶ್ವರ ಮಾರ್ಕೆಟಿಂಗ್‌ನ ಅಣ್ಣಾಸಾಹೇಬ ಜೊಲ್ಲೆ, ಕ್ವಾಲಿಟಿ ಪ್ರಾಪರ್ಟಿ ಮ್ಯಾನೇಜ್‌ಮೆಂಟ್‌ನ ಲಿಯಾಂಡರ್ ಪೇಸ್ (ಟೆನಿಸ್ ಪಟು), ಎಎಲ್‌ವಿ ಪ್ರಾಜೆಕ್ಟ್ಸ್‌ನ ನಂದಿನಿ ಆಳ್ವ, ಪ್ರಿಯಾಂಕಾ ಒಬೆರಾಯ್ (ಜೀವರಾಜ ಆಳ್ವ ಕುಟುಂಬ), ಜೆ.ಎಚ್. ಪಟೇಲ್ ಹೋಟೆಲ್ಸ್ ಇಂಡಿಯಾ ಪ್ರೈ.ಲಿ.ನ ಮಹಿಮಾ ಪಟೇಲ್ (ಜೆ.ಎಚ್.ಪಟೇಲ್ ಕುಟುಂಬ).
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.