ಟ್ವೀಟರ್‌ ಸಿಇಒ ಜಾಕ್‌ ಡೋರ್ಸಿ ಖಾತೆ ಹ್ಯಾಕ್!

By Web DeskFirst Published Sep 1, 2019, 9:26 AM IST
Highlights

ಸೋಷಿಯಲ್ ಮೀಡಿಯಾ ಯಾವತ್ತೂ ಸೇಫ್ ಅಲ್ಲ | ಟ್ವಿಟರ್ ಸಿಇಒ ಅಕೌಂಟನ್ನೇ ಬಿಟ್ಟಿಲ್ಲ ಹ್ಯಾಕರ್ಸ್ | 

ನ್ಯೂಯಾರ್ಕ್ (ಸೆ. 01): ಸೇಫ್‌ ಆಂಡ್‌ ಸೆಕ್ಯೂರ್‌ ಎಂದು ಹೇಳಿಕೊಳ್ಳುವ ಸಾಮಾಜಿಕ ಜಾಲತಾಣ ದೈತ್ಯ ಟ್ವೀಟರ್‌ನ ಅಸಲಿಯತ್ತು ಬಯಲಾಗಿದೆ. ಸ್ವತಃ ಟ್ವಿಟರ್‌ ಸಿಇಒ ಜಾಕ್‌ ಡೋರ್ಸಿ ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿದ್ದಾರೆ.

ಶನಿವಾರ ಡೊರ್ಸಿ ಅವರ ಖಾತೆಯನ್ನು Chuckling squad ಎನ್ನುವ ತಂಡ ಹ್ಯಾಕ್‌ ಮಾಡಿದ್ದು, ಸರಣಿ ಅಶ್ಲೀಲ ಹಾಗೂ ಯಹೂದಿ ವಿರೋಧಿ ಪೋಸ್ಟ್‌ಗಳನ್ನು ಹಾಕಿದೆ. ಅಲ್ಲದೇ ಟ್ವೀಟರ್‌ ಮುಖ್ಯ ಕಚೇರಿಯಲ್ಲಿ ಬಾಂಬ್‌ ಇಡಲಾಗಿದೆ ಹುಸಿ ಸುದ್ದಿ ಬಿತ್ತರಿಸಲಾಗಿದೆ. ಸುಮಾರು 15 ನಿಮಿಷಗಳ ಬಳಿಕ ಹ್ಯಾಕರ್‌ಗಳಿಂದ ಖಾತೆಯನ್ನು ಹಿಂದಕ್ಕೆ ಪಡೆಯುವಲ್ಲಿ ಭದ್ರತಾ ತಂಡ ಯಶಸ್ವಿಯಾಗಿದೆ.

ಜೊತೆಗೆ ಜಾಕ್‌ರ ಖಾತೆ ಸುರಕ್ಷಿತವಾಗಿದೆ ಎಂದು ಟ್ವೀಟರ್‌ ಹೇಳಿದೆ. ಹ್ಯಾಕರ್ಸ್‌ ಪೋಸ್ಟ್‌ ಮಾಡಿದ್ದ ಎಲ್ಲಾ ಟ್ವೀಟ್‌ಗಳನ್ನು ಅಳಿಸಿಹಾಕಲಾಗಿದ್ದು, ಸುರಕ್ಷಾ ಕ್ರಮಗಳೊಂದಿಗೆ ಯಾವುದೇ ರಾಜಿ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

click me!