ಇಂದಿನಿಂದ ಆನ್ ಲೈನ್ ರೈಲ್ವೇ ಟಿಕೆಟ್ ತುಟ್ಟಿ

By Kannadaprabha NewsFirst Published Sep 1, 2019, 8:47 AM IST
Highlights

 ಭಾನುವಾರದಿಂದ ಜಾರಿಗೆ ಬರುವಂತೆ ಆನ್‌ಲೈನ್‌ ಮೂಲಕ ಖರೀದಿ ಮಾಡುವ ರೈಲ್ವೆ ಟಿಕೆಟ್‌ಗಳ ಶುಲ್ಕವು ಕ್ರಮವಾಗಿ 15 ರು. ಮತ್ತು 30 ರು.ನಷ್ಟುದುಬಾರಿಯಾಗಲಿದೆ. ಟಿಕೆಟ್‌ ಖರೀದಿ ವೇಳೆ ಈ ಹಿಂದೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ಮರುಜಾರಿ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ.

ನವದೆಹಲಿ (ಸೆ. 01): ಭಾನುವಾರದಿಂದ ಜಾರಿಗೆ ಬರುವಂತೆ ಆನ್‌ಲೈನ್‌ ಮೂಲಕ ಖರೀದಿ ಮಾಡುವ ರೈಲ್ವೆ ಟಿಕೆಟ್‌ಗಳ ಶುಲ್ಕವು ಕ್ರಮವಾಗಿ 15 ರು. ಮತ್ತು 30 ರು.ನಷ್ಟುದುಬಾರಿಯಾಗಲಿದೆ. ಟಿಕೆಟ್‌ ಖರೀದಿ ವೇಳೆ ಈ ಹಿಂದೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ಮರುಜಾರಿ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ.

ಹೀಗಾಗಿ ಪ್ರಯಾಣಿಕರು ಸಾಮಾನ್ಯ ಟಿಕೆಟ್‌ ಖರೀದಿಗೆ 15 ರು. ಮತ್ತು ಹವಾನಿಯಂತ್ರಿತ ಬೋಗಿಯಲ್ಲಿ ಟಿಕೆಟ್‌ ಖರೀದಿಸಲು 30 ರು. ಶುಲ್ಕ ತೆರಬೇಕಿದೆ. ಇದರ ಮೇಲೆ ಜಿಎಸ್‌ಟಿ ಕೂಡಾ ವಿಧಿಸಲಾಗುವುದು. ಈ ಹಿಂದೆ ಕೂಡಾ ಇಂಥ ಶುಲ್ಕ ವಿಧಿಸುವ ಪದ್ಧತಿ ಜಾರಿಯಲ್ಲಿತ್ತು.

ಆದರೆ ಆಗ ಸಾಮಾನ್ಯ ಟಿಕೆಟ್‌ಗಳಿಗೆ 20 ರು. ಮತ್ತು ಹವಾನಿಯಂತ್ರಿತ ಬೋಗಿಯ ಟಿಕೆಟ್‌ಗಳಿಗೆ 40 ರು. ಶುಲ್ಕ ವಿಧಿಸಲಾಗುತಿತ್ತು. ಆದರೆ ಡಿಜಿಟಲ್‌ ಪಾವತಿ ವ್ಯವಸ್ಥೆ ಉತ್ತೇಜಿಸುವ ನಿಟ್ಟಿನಲ್ಲಿ 3 ವರ್ಷಗಳ ಹಿಂದೆ ಸೇವಾ ಶುಲ್ಕವನ್ನು ರದ್ದು ಮಾಡಲಾಗಿತ್ತು.

ಆದರೆ ಸೇವಾ ಶುಲ್ಕ ರದ್ದು ಮಾಡಿದ ಬಳಿಕವೂ 2016-17ನೇ ಅವಧಿಯಲ್ಲಿ ಐಆರ್‌ಸಿಟಿಸಿ ಮೂಲಕ ಖರೀದಿ ಮಾಡುವ ಇ- ಟಿಕೆಟ್‌ಗಳಲ್ಲಿ ಶೇ.26 ರಷ್ಟುಕುಸಿತ ಕಂಡಿತ್ತು. ಜೊತೆಗೆ ಸೇವಾ ಶುಲ್ಕ ಮಾಡಿದ್ದರಿಂದ ಆಗುವ ನಷ್ಟವನ್ನು ಐಆರ್‌ಸಿಟಿಸಿಗೆ ಪಾವತಿಸಲು ಕೇಂದ್ರ ಹಣಕಾಸು ಸಚಿವಾಲಯ ನಿರಾಕರಿಸಿತ್ತು. ಹೀಗಾಗಿ ಮತ್ತೆ ಸೇವಾ ಶುಲ್ಕ ಮರುಜಾರಿಗೆ ನಿರ್ಧರಿಸಲಾಗಿದೆ.

click me!