'ಸನ್ನಿ ನೈಟ್'ಗೆ ಯಾರೂ ಅನುಮತಿ ಕೋರಿಲ್ಲ; ಅನುಮತಿ ಕೇಳಿದರೂ ಕೊಡಲ್ಲ: ಪೊಲೀಸ್ ಆಯುಕ್ತ

By Suvarna Web DeskFirst Published Dec 17, 2017, 2:14 PM IST
Highlights

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಟೈಮ್ಸ್ ಕ್ರಿಯೇಷನ್ ಕಂಪನಿಯವರು ಕಾರ್ಯಕ್ರಮಕ್ಕೆ ಅನುಮತಿ ಕೇಳಿಲ್ಲ. ಸಂಸ್ಥೆಯವರೇ ಟಿಕೆಟ್ ಹಂಚಿಕೊಂಡಿದ್ದಾರೆ. ಒಂದು ವೇಳೆ ಸಂಸ್ಥೆಯವರು ಕಾರ್ಯಕ್ರಮಕ್ಕೆ ಅನುಮತಿ ಕೇಳಿದರೂ ಅನುಮತಿ ನೀಡುವುದಿಲ್ಲ ಎಂದರು.

ಬೆಂಗಳೂರು(ಡಿ.17): ಹೊಸ ವರ್ಷಾಚರಣೆ ಪ್ರಯುಕ್ತ ನಗರದಲ್ಲಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್'ರ ‘ಸನ್ನಿ ನೈಟ್ ಇನ್ ಬೆಂಗಳೂರು’ ಕಾರ್ಯಕ್ರಮ ಆಯೋಜಿಸಲು ಅನುಮತಿ ಕೋರಿ ನಮ್ಮನ್ನು ಯಾರು ಸಂಪರ್ಕಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಟೈಮ್ಸ್ ಕ್ರಿಯೇಷನ್ ಕಂಪನಿಯವರು ಕಾರ್ಯಕ್ರಮಕ್ಕೆ ಅನುಮತಿ ಕೇಳಿಲ್ಲ. ಸಂಸ್ಥೆಯವರೇ ಟಿಕೆಟ್ ಹಂಚಿಕೊಂಡಿದ್ದಾರೆ. ಒಂದು ವೇಳೆ ಸಂಸ್ಥೆಯವರು ಕಾರ್ಯಕ್ರಮಕ್ಕೆ ಅನುಮತಿ ಕೇಳಿದರೂ ಅನುಮತಿ ನೀಡುವುದಿಲ್ಲ ಎಂದರು.

ಅನುಮತಿ ಇಲ್ಲದೆ, ಸನ್ನಿ ಲಿಯೋನ್ ಕರೆಸಿ ಕಾರ್ಯಕ್ರಮ ಮಾಡಿದರೆ ಅದರ ಹೊಣೆ ಸಂಸ್ಥೆಯದ್ದೇ ಆಗುತ್ತದೆ. ಈ ಕಾರ್ಯಕ್ರಮದಲ್ಲಿ ಏನೇ ಅನಾಹುತ ನಡೆದರೂ ಅದರ ಹೊಣೆ ಹೊರಬೇಕಾಗುತ್ತದೆ. ಕೇರಳಕ್ಕೆ ಈ ಹಿಂದೆ ಸನ್ನಿ ಲಿಯೋನ್ ಬಂದಿದ್ದ ಸಂದರ್ಭದಲ್ಲಿ ಸಾಕಷ್ಟು ಅನಾಹುತಗಳು ನಡೆದಿದ್ದವು. ಇದನ್ನು ಕಾರ್ಯಕ್ರಮ ಆಯೋಜಿಸಿರುವ ಸಂಸ್ಥೆ ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಮಾನ್ಯತಾ ಟೆಕ್‌'ಪಾರ್ಕ್‌'ಗೆ ಹೊಂದಿಕೊಂಡಿರುವ ವೈಟ್ ಆರ್ಕಿಡ್ ಆವರಣದಲ್ಲಿ ಡಿ.31 ರಂದು ರಾತ್ರಿ ಹೊಸ ವರ್ಷಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್‌'ನನ್ನು ಕರೆ ತರಲು ಕಂಪನಿಯವರು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರ ಬೆನ್ನಲ್ಲೇ ಕಳೆದ ಎರಡು ದಿನಗಳ ಹಿಂದೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಆಯುಕ್ತರಿಗೆ ಸೂಚಿಸಿರುರುವುದಾಗಿ ಹೇಳಿದ್ದರು.

click me!