ಸುಪ್ರೀಂ ತೀರ್ಪು: ಸರ್ಕಾರಕ್ಕೆ ಸೋಲು?, ಯಾವುದಯ್ಯಾ ಸಿಎಂಗೆ ಮುಂದಿನ ದಾರಿ?

By Web DeskFirst Published Jul 17, 2019, 11:35 AM IST
Highlights

ಸುಪ್ರೀಂ ತೀರ್ಪು: ಸ್ಪೀಕರ್ ಹಾಗೂ ಅತೃಪ್ತ ಶಾಸಕರಿಗೆ ನಿರಾಳ, ಸರ್ಕಾರಕ್ಕೆ ಆತಂಕ!| ವಿಶ್ವಾಸಮತ ಯಾಚನೆ ವೇಳೆ ದೋಸ್ತಿ ಸರ್ಕಾರದ ಭವಿಷ್ಯ ನಿರ್ಧಾರ| ದೋಸ್ತಿ ಸರ್ಕಾರ ಉಳಿಯಬೇಕೆಂದರೆ ಇನ್ನು ಮ್ಯಾಜಿಕ್ ನಡೆಯಬೇಕಷ್ಟೇ| ಸಿಎಂ ಕುಮಾರಸ್ವಾಮಿ ಎದುರಿರುವ ದಾರಿಯೇನು?

ಬೆಂಗಳೂರು[ಜು.17]: ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಹಾಗೂ ಅತೃಪ್ತ ಶಾಸಕರ ನಡುವಿನ ಗುದ್ದಾಟಕ್ಕೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಇಬ್ಬರ ಹಕ್ಕುಗಳನ್ನೂ ಎತ್ತಿ ಹಿಡಿದಿದೆ. ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಸರ್ಕಾರಕ್ಕೆ ಪತನಗೊಳ್ಳುವ ಭೀತಿ ಎದುರಾಗಿದೆ.

ಹೌದು ಕಳೆದೆರಡು ವಾರದಿಂದ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದೆ. ಒಂದೆಡೆ 15 ಅತಪ್ತ ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈ ಹೋಟೇಲ್ ಸೇರಿದ್ದರೆ, ಇತ್ತ ದೋಸ್ತಿ ನಾಯಕರು ಅವರ ಮನವೊಲಿಲು ಯತ್ನಿಸಿದ್ದರು. ಆದರೆ ಯಾವುದಕ್ಕೂ ಜಗ್ಗದ ಅತೃಪ್ತ ಶಾಸಕರು ರಾಜೀನಾಮೆ ಅಂಗೀಕಾರಕ್ಕೆ ಸುಪ್ರೀಂ ಬಾಗಿಲು ತಟ್ಟಿದ್ದರು. ಹೀಗಿರುವಾಗ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ದಾಳವೆಸೆದಿದ್ದರು. ಅಲ್ಲದೇ ಎಲ್ಲಾ ಶಾಸಕರು ಸದನಕ್ಕೆ ಹಾಜರಾಗಬೇಕೆಂದು ವಿಪ್ ಜಾರಿಗೊಳಿಸಿದ್ದರು.

ಸುಪ್ರೀಂ ಮಹಾ ತೀರ್ಪು: ರಾಜೀನಾಮೆ ಸ್ವೀಕಾರ, ಸ್ಪೀಕರ್‌ಗಿಲ್ಲ ಒತ್ತಡ

ಆದರೀಗ ಸರ್ಕಾರ ಉಳಿಸಿಕೊಳ್ಳುವ ಯತ್ನದಲ್ಲಿದ್ದ ದೋಸ್ತಿಗೆ ಸುಪ್ರೀಂ ತೀರ್ಪಿನಿಂದ ಹಿನ್ನಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸರ್ಕಾರ ನಾಳೆ ಗುರುವಾರ ವಿಶ್ವಾಸಮತ ಯಾಚಿಸಬಹುದು ಎಂದು ತಿಳಿಸಿದೆಯಾದರೂ, ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಅಲ್ಲದೇ ಈಗಾಗಲೇ ಸರ್ರಕಾರ ಜಾರಿಗೊಳಿಸಿರುವ ವಿಪ್ ರಾಜೀನಾಮೆ ಸಲ್ಲಿಸಿರುವ 15 ಅತೃಪ್ತ ಶಾಸಕರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅವರು ಅನರ್ಹಗೊಳ್ಳುವ ಬೀತಿಯಿಂದಲೂ ಪಾರಾಗಿದ್ದಾರೆ.

ಒಂದು ವೇಳೆ ಅತೃಪ್ತ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಹಾಜರಾಗದಿದ್ದರೆ ಸರ್ಕಾರ ಅಲ್ಪಮತಕ್ಕೆ ಕುಸಿದು ಪತನಗೊಳ್ಳಲಿದೆ. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ 5 ವರ್ಷದ ಅವಧಿ ಪೂರ್ಣಗೊಳಿಸುವ ಮೊದಲೇ ಬೀಳಲಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿಎಂ ಕುಮಾರಸ್ವಾಮಿ ಎದುರಿರುವ ದಾರಿಯೇನು?

1. ಸುಪ್ರೀಂಕೋರ್ಟ್ ತೀರ್ಪಿನಿಂದ ಮುಖ್ಯಮಂತ್ರಿಗೆ ಹಿನ್ನಡೆ

2. ನಾಳೆ ವಿಶ್ವಾಸಮತ ಯಾಚಿಸುವ ನಿರ್ಧಾರ ಕೈಬಿಡಬಹುದ

3. ವಿಶ್ವಾಸಮತ ಯಾಚಿಸಿದೇ ವಿದಾಯ ಭಾಷಣ ಮಾಡಬಹುದು

4. ವಿದಾಯ ಭಾಷಣದ ಬಳಿಕ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬಹುದು

ಸರ್ಕಾರ ಉಳಿಯಬೇಕೆಂದರೆ ಅತೃಪ್ತ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಸದನದಲ್ಲಿ ಹಾಜರಿಲೇಬೇಕು. ಸರ್ಕಾರ ಉಳಿಯುತ್ತಾ? ಬೀಳುತ್ತಾ? ವಿಶ್ವಾಸಮತ ಯಾಚನೆ ವೇಳೆಯಷ್ಟೇ ತಿಳಿಯಲಿದೆ.

click me!