
ನವದೆಹಲಿ: ಸರ್ಕಾರ ನೋಟು ಅಮಾನ್ಯ ಕ್ರಮ ಘೋಷಿಸಿದ ಬಳಿಕ ಸಂಶಯಾಸ್ಪದ ಹಣಕಾಸು ವ್ಯವಹಾರ ನಡೆಸಿರುವ 5.56 ಲಕ್ಷ ಮಂದಿಯನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿದೆ. ಈ ವ್ಯಕ್ತಿಗಳು ಬ್ಯಾಂಕ್’ಗಳಲ್ಲಿ ಡಿಪಾಸಿಟ್ ಮಾಡಿರುವ ಹಣ ಅವರು ಪಾವತಿಸಿರುವ ತೆರಿಗೆಗೆ ಅನುಗುಣವಾಗಿಲ್ಲವೆಂದು ಹೇಳಲಾಗಿದೆ.
ಜತೆಗೆ, ಇ-ವೆರಿಫಿಕೇಶನ್ ಸಂದರ್ಭದಲ್ಲಿ ತಮ್ಮ ಎಲ್ಲಾ ಬ್ಯಾಂಕು ಖಾತೆಗಳ ವಿವರ ಬಹಿರಂಗಪಡಿಸದೇ ಇರುವ 1.04 ಲಕ್ಷ ಮಂದಿಯನ್ನು ಕೂಡಾ ಗುರುತಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಮೊದಲ ಹಂತದಲ್ಲಿ, ಭಾರೀ ಪ್ರಮಾಣದ ನಗದು ಡಿಪಾಸಿಟ್ ಮಾಡಿದ 17.92 ಲಕ್ಷ ಮಂದಿಯನ್ನು ಇ-ವೆರಿಫಿಕೇಶನ್’ಗಾಗಿ ಗುರುತಿಸಲಾಗಿತ್ತು. ಅದರ ಪೈಕಿ ಸುಮಾರು 9.72 ಲಕ್ಷ ಮಂದಿ ಆನ್’ಲೈನ್ ಮೂಲಕ ಪ್ರತಿಕ್ರಿಯಿಸಿದ್ದರು ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.
ಗುರುತಿಸಲಾದ ವ್ಯಕ್ತಿ./ ಮಾಹಿತಿದಾರರ ವಿವರವನ್ನು http://incometaxindiaefiling.gov.in ಪ್ರಕಟಿಸಲಾಗಿದೆ. ಆ ವ್ಯಕ್ತಿಗಳು ಆದಾಯ ತೆರಿಗೆ ಇಲಾಖೆಗೆ ಮುಖತ: ಭೇಟಿಯಾಗುವ ಅವಶ್ಯಕತೆಯಿಲ್ಲ, ಆನ್’ಲೈನ್ ಮೂಲಕ ಪ್ರತಿಕ್ರಿಯಿಸಬಹುದಾಗಿದೆ. ಜತೆಗೆ ಇ-ಮೈಲ್ ಹಾಗೂ ಎಸ್ಎಂಎಸ್ ಮೂಲಕ ಅವರಿಗೆ ಈ ಬಗ್ಗೆ ಮಾಹಿತಿಯನ್ನು ರವಾನಿಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.