
ನವದೆಹಲಿ(ಫೆ.24): ಅಪನಗದೀಕರಣದ ಬಳಿಕ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಏಕಾಏಕಿ ಹಣದ ವಹಿವಾಟು ಏರಿಕೆಯಾದ ಕಂಪನಿಗಳ ಮೇಲೆ ತೆರಿಗೆ ಅಧಿಕಾರಿಗಳು ನಿಗಾ ಇಟ್ಟಿದೆ.
ಒಂದು ವೇಳೆ ಯಾವುದೇ ಕಂಪನಿಯ ಆದಾಯ ಅಸಹಜವಾಗಿ ಏರಿಕೆಯಾಗಿದ್ದರೆ, ತೆರಿಗೆ ಇಲಾಖೆ ಅಂಥ ಕಂಪನಿಯ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಿದೆ. ವ್ಯಾಪಾರಿ ಲಾಭವನ್ನು ತೋರಿಸುವಾಗ ಕಪ್ಪುಹಣವನ್ನು ಮರೆಮಾಚಲಾಗಿದೆಯೇ ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ರದ್ದಾದ ನೋಟುಗಳ ಮೂಲಕ ಕಾನೂನು ಸಮ್ಮತ ತೆರಿಗೆ ಪಾವತಿಗೆ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ, ಹಳೆಯ ನೋಟುಗಳನ್ನು ಬಳಸಿ ವಾಣಿಜ್ಯ ಕಂಪನಿಗಳು ಅಧಿಕ ತೆರಿಗೆಗಳನ್ನು ಪಾವತಿಸಿರುವ ನಿರ್ದಶನಗಳಿವೆ. ಕಂಪನಿಗಳು ತೋರಿಸಿರುವ ನಗದು ವಹಿವಾಟು, ಸಮಂಜಸ ಮಾರ್ಗದಿಂದ ಬಂದಿದ್ದೇ ಅಥವಾ ಕಪ್ಪು ಹಣವನ್ನು ತೊಡಗಿಸಲಾಗಿದೆ ಎಂಬುದನ್ನು ಪರಿಶೀಲನೆ ನಡೆಸಲಾಗುವುದು. ಮಾಸಿಕವಾಗಿ ಕಂಪನಿ ಆದಾಯ ಮತ್ತು ವೆಚ್ಚ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.