
ಬೆಂಗಳೂರು(ಫೆ.24): ಕಾಂಗ್ರೆಸ್ ಎಂಎಲ್ಎ ಗೋವಿಂದರಾಜು ಅವರ ಡೈರಿಯಲ್ಲಿ ಬಯಲಾಗಿರುವ ಸ್ಫೋಟಕ ಸತ್ಯದ ಕುರಿತಂತೆ ರಾಜ್ಯಸಭಾ ಸದಸ್ಯ, ರಾಜೀವ್ ಚಂದ್ರಶೇಖರ್ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ.
'ನಾನು ಅಂದೇ ಹೇಳಿದ್ದೆ, ಸ್ಟೀಲ್ ಫ್ಲೈಓವರ್ ಪ್ರಾಜೆಕ್ಟ್ ಭ್ರಷ್ಟಾಚಾರದಿಂದ ಕೂಡಿರುವ ಯೋಜನೆ ಎಂದು. ಇಂದು ಆ ಮಾತು ನಿಜವಾಗಿದೆ. ತಮ್ಮ ಡೈರಿಯಲ್ಲಿ ಸರ್ಕಾರ ಮಾಡಿರುವ ದೇಣಿಗೆ ಹಗರಣಗಳನ್ನು ಬರೆದಿಟ್ಟು, ಇಂದು ಸತ್ಯ ಬಹಿರಂಗಗೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಈಗಾಗಲೇ ನಮ್ಮ ಕಣ್ಮುಂದೆ ಜಯಚಂದ್ರ, ಚಿಕ್ಕರಾಯಪ್ಪ, ಜಾರಕಿಹೋಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಎಂ.ಟಿ.ನಾಗರಾಜ್ರಂತ ಭ್ರಷ್ಟ ನಾಯಕರ ಮುಖವಾಡವನ್ನ ತೆರಿಗೆ ಇಲಾಖೆ ಹೊರಗೆಳೆದಿತ್ತು. ಅದನ್ನ ಸಾಭೀತುಪಡಿಸುವ ಸಾಕಷ್ಟು ಸಾಕ್ಷಿಗಳು ಕೂಡ ಇವೆ' ಎಂದು ತಮ್ಮ ಪತ್ರದಲ್ಲಿ ರಾಜೀವ್ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.