ಬೆಂಗಳೂರಿನ ಪಿಇಎಸ್ ವಿದ್ಯಾರ್ಥಿಗಳ ಉಪಗ್ರಹ ನಾಳೆ ಇಸ್ರೋದಿಂದ ಕಕ್ಷೆಗೆ

By Internet DeskFirst Published Sep 24, 2016, 4:55 PM IST
Highlights

ಬೆಂಗಳೂರು(ಸೆ.25): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಾಳೆ 8 ಉಪಗ್ರಹಗಳನ್ನು ಕಕ್ಷೆಗೆ ಉಡಾವಣೆ ಮಾಡುತ್ತಿದ್ದು, ಈ ಸಾಧನೆಯಲ್ಲಿ ಬೆಂಗಳೂರಿನ ಪಿಇಎಸ್ ವಿವಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಾಲೂ ಇದೆ. ನಾಳೆ ಉಡಾವಣೆ ಆಗುತ್ತಿರುವ 8 ಉಪಗ್ರಹಗಳ ಪೈಕಿ ಪೈಸ್ಯಾಟ್ ಹೆಸರಿನ ಉಪಗ್ರಹವನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಸಿದ್ದಪಡಿಸಿದ್ದಾರೆ.

ಐದು ವರ್ಷಗಳ ಕಾಲ ಶ್ರಮ ವಹಿಸಿ ಈ ಪೈಸ್ಯಾಟ್ ಸಿದ್ಧಪಡಿಸಿದ್ದಾರೆ. ಇಸ್ರೋ ಮಾಜಿ ವಿಜ್ಞಾನಿಗಳಾ ಸಾಂಬಶಿವರಾವ್ ಹಾಗೂ ಅಗರ್'ವಾಲ್ ಮಾರ್ಗದರ್ಶನದಲ್ಲಿ ಈ ಉಪಗ್ರಹ ಸಿದ್ಧಪಡಿಸಲಾಗಿದೆ. ಬಾಹ್ಯಾಕಾಶದಲ್ಲಿ ಸುಮಾರು 670 ಕಿ.ಮೀ ಎತ್ತರದಲ್ಲಿ ಈ ಉಪಗ್ರಹ ಭೂಮಿಯನ್ನು ಸುತ್ತಿ ಹಾಕಿ ಛಾಯಾ ಚಿತ್ರಗಳನ್ನು ರವಾನಿಸುತ್ತದೆ. ಇದರ ಕಂಟ್ರೋಲಿಂಗ್ ವ್ಯವಸ್ಥೆ ಪಿಇಎಸ್ ಕಾಲೇಜಿನಲ್ಲೇ ಇದೆ. ವಿದ್ಯಾರ್ಥಿಗಳೇ ಇದರ ನಿರ್ವಹಣೆ ಮಾಡುತ್ತಾರೆ.

Latest Videos

5.25 ಕೆ.ಜಿ ತೂಕ ಇರುವ ಪೈಸ್ಯಾಟ್  ಉಪಗ್ರಹ ಭೂಕಕ್ಷೆ ಸೇರಿ ಅಲ್ಲಿಂದ ಭೂಮಿಯ ಛಾಯಾಚಿತ್ರಗಳನ್ನು ಸೆರೆ ಹಿಡಿದು ಕಳಿಸಲಿದೆ. ವಿಶೇಷ ಅಂದರೆ ಈ ಉಪಗ್ರಹವನ್ನು ಪಿಇಎಸ್ ಕಾಲೇಜಿಂದಲೇ ವಿದ್ಯಾರ್ಥಿಗಳು ನಿರ್ವಹಣೆ ಮಾಡುತ್ತಾರೆ. ಇದಕ್ಕೆಂದೇ ಇಲ್ಲಿ ಆಂಟೆನಾ ವ್ಯವಸ್ಥೆಯೂ ಮಾಡಲಾಗಿದೆ. ಈ ಉಪಗ್ರಹ ತಯಾರಿಗೆ 1.5 ಕೋಟಿ ರೂ ವೆಚ್ಚವಾಗಿದೆ.

ಈ ಉಪಗ್ರಹದ ವಿಶೇಷತೆಗಳು

-ಎಸ್​-ಬ್ಯಾಂಡ್​ ಫ್ರೀಕ್ವೆನ್ಸಿಯಲ್ಲಿ ಕಾರ್ಯನಿರ್ವಹಿಸುವ ಉಪಗ್ರಹ.

- ಭೂಮಿಯಿಂದ 670 ಕಿ.ಮೀ ಎತ್ತರದಲ್ಲಿ ಫೊಟೋಗಳನ್ನು ಸೆರೆ ಹಿಡಿಯಲಿದೆ.

- 90 ಮೆಗಾ ಪಿಕ್ಸೆಲ್ ಕ್ಯಾಮೆರಾದಿಂದ ಫೊಟೋ ಕ್ಲಿಕ್ ಮಾಡಲಿದೆ.

- 5.25 ಕೆ.ಜಿ. ತೂಕದ ಪೈಸ್ಯಾಟ್​ ತಯಾರಿಗೆ 1.5 ಕೋಟಿ ರೂ ವೆಚ್ಚ ಆಗಿದೆ.

- ವಿದ್ಯಾರ್ಥಿಗಳ ಮುಂದಿನ ಪ್ರಾಜೆಕ್ಟ್ ವರ್ಕ್​ಗಳಿಗೆ ಬಳಕೆ ಆಗಲಿದೆ.

- ಒಂದು ವರ್ಷದವರೆಗೆ ಭೂಕಕ್ಷೆಯಲ್ಲಿ ಸುತ್ತು ಹೊಡೆಯಲಿದೆ.

ವರದಿ: ಮಸೂದ್ ದೊಡ್ಡೇಬಾಗಿಲು, ಸುವರ್ಣ ನ್ಯೂಸ್

click me!